ಪ್ರಮುಖ ಸುದ್ದಿರಾಜ್ಯವಾರ್ತೆ

ಜಲಸ್ಪೋಟದ ಪರಿಣಾಮ ಹೇಗಾಗತ್ತೆ ಗೊತ್ತೇ…

ಮೊನ್ನೆ ಮೊನ್ನೆ ದಕ್ಷಿಣ ಕನ್ನಡ ಜನತೆಯ ನಿದ್ದೆಗೆಡಿಸಿದ ಮಳೆಹಾನಿ ಪ್ರದೇಶಕ್ಕೆ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಅಲ್ಲಿನ ಸಾಕ್ಷಾತ್ ಅನುಭವ ಪಡೆದ ಅವರು ವಾರ್ತೆ.ಕಾಂಗಾಗಿಯೇ ವಿಶೇಷ ವರದಿ ನೀಡಿದ್ದಾರೆ. ನಿಮಗಾರಿ…
– ಸಂಪಾದಕ

‘ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ‘…..ಎಂಬಂತೆ ಹಲವಾರು ವರುಷಗಳಿಂದ ಪಶ್ಚಿಮ ಘಟ್ಟದ ಮೇಲೆ ಸರಕಾರದ ಅಸಂಬದ್ಧ ಯೋಜನೆಗಳು ಹಾಗೂ ಮನುಜ ಸಾಮ್ರಾಜ್ಯದ ಹಸ್ತ ಕ್ಷೇಪ ಹೆಚ್ಚಾಗುತ್ತಿದ್ದು ಇದನ್ನು ಸಹಿಸಲಾಗದ ಪ್ರಕೃತಿ ಒಂದೇ ನಿಮಿಷದಲ್ಲಿ ಸರ್ವಸ್ವ ವನ್ನೋ ಕೊಚ್ಚಿಕೊಂಡು ತನ್ನ ಪ್ರಭಾವವನ್ನು ತೋರಿಸಿಯೇ ಬಿಟ್ಟಿತು.

ಪಶ್ಚಿಮ ಘಟ್ಟದ ನದೀ ಮೂಲ, ಮಳೆಕಾಡು ಎಂಬ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸರ ವಿನಾಶಕ ಯೋಜನೆಗಳು ಹೆಚ್ಚಾಗುತ್ತಿದ್ದು ಅಲ್ಲಿನ ಮಳೆಯನ್ನು ಇಂಗಿಸಿಕೊಳ್ಳುವ ಹುಲ್ಲುಗಾವಲು ಮತ್ತು ಮಳೆ ನೀರನ್ನು ತನ್ನ ಜಲ ಪಾತ್ರೆಯಲ್ಲಿ ಇಟ್ಟುಕೊಂಡು ವರ್ಷ ಪೂರ್ತಿ ಹೊಳೆಯನ್ನು ಜೀವಂತವಾಗಿ ಇಟ್ಟುಕೊಳ್ಳುವ ಶೋಲಾ ಅಡವಿ ಕಳೆದ ಕೆಲವು ವರ್ಷಗಳಿಂದ ತನ್ನ ವೇದನೆ, ನೋವು, ಸಂಕಟಗಳನ್ನು ನುಂಗಿಕೊಳ್ಳುತ್ತಾ ಸುಮ್ಮನಿ ತ್ತು.

ಆದರೆ ತಾಳ್ಮೆ, ನೋವಿಗೂ ಒಂದು ಮಿತಿ ಇದೆ, ಅತಿಯಾದಾಗ ತನ್ನ ಅಸಹಾಯಕತೆ ಯನ್ನೂ ವ್ಯಕ್ತ ಪಡಿಸಿದಾಗ ಏನು ಆಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಆಗುತ್ತಿರುವ ಭೂಕುಸಿತ, ಜಲ ಪ್ರವಾಹಗಳು ಸಾಕ್ಷಿ. ಪಶ್ಚಿಮ ಘಟ್ಟದ ಹುಲ್ಲುಗಾವಲು ಮತ್ತು ಮಳೆಕಾಡಿನ ಮಡಿಲಿಗೆ ಗೀರು ಗಾಯಗಳು ಸತತ ಆಗುತ್ತಿದ್ದ ಕಾರಣ ವಿಪರೀತ ಮಳೆ ಆದಾಗ ಹುಲ್ಲುಗಾವಲು ಪ್ರದೇಶವನ್ನು ಕಳೆದುಕೊಂಡ ಮಣ್ಣು ಸಡಿಲ ಆಗಿ ಅದು ಶೋಲಾ ಕಾನನದ ಒಳಗೆ ನುಗ್ಗಿ ಅಲ್ಲಿನ ಜಲ ಪದರಗಳ ಒಳಗೆ ಧುಮುಕಿದ ಸಂದರ್ಭದಲ್ಲಿ ಧಾರಣಾ ಶಕ್ತಿಗಿಂತ ಹೆಚ್ಚು ಪ್ರವಾಹ ಆದರೆ ಪಶ್ಚಿಮ ಘಟ್ಟ ಜಲ ಪಾತ್ರೆ ಒಡೆದು ಜಲ ಸ್ಫೋಟ ಆಗಿ ಭೂಕುಸಿತ ಆಗುತ್ತದೆ.

ಕಳೆದ ವರ್ಷ ಮಡಿಕೇರಿ, ಕೇರಳ ಮತ್ತು ಮೊನ್ನೆ ಚಾರ್ಮಾಡಿ ಘಾಟಿಯಲ್ಲಿ ಆದದ್ದು ಇದೇ ಜಲಸ್ಫೋಟವೆ ಹೊರತು ಆದು ಮಾಮೂಲಿ ನೆರೆ ಅಲ್ಲ. ಇನ್ನಾದರೂ ಪಶ್ಚಿಮ ಘಟ್ಟದಲ್ಲಿ ಅದರ ಧಾರಣಾ ಶಕ್ತಿಯನ್ನೂ ಮೀರಿ ಅವಿವೇಕ ತನದ ಯೋಜನೆಗಳನ್ನು ದೌರ್ಜನ್ಯದಿಂದ ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಪ್ರಾಕೃತಿಕ ದುರಂತಗಳು ಆಗುವ ಸಾಧ್ಯತೆಗಳಿವೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here