ಜಲಮಂಡಳಿಯಿಂದ ಕೇಸ್ ದಾಖಲು

0
198

ಬೆಂಗಳೂರು ಪ್ರತಿನಿಧಿ ವರದಿ
ಹೆಲಿಕಾಪ್ಟರ್ ನಿಂದ ನೀರಿಗೆ ಬಿದ್ದು ನಟರಿಬ್ಬರ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಜಲಮಂಡಳಿಯಿಂದ ಪ್ರಕರಣ ದಾಖಲಾಗಿದೆ. ಮಾಸ್ತಿಗುಡಿ ಚಿತ್ರದ ಮೂವರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
 
 
 
ತಾವರೆಕೆರೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304ರಡಿಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 304-ಉದ್ದೇಶಪೂರ್ವಕವಲ್ಲದ ಹತ್ಯೆ ಎಂದು ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳು ತಾವರೆಕೆರೆ ಠಾಣೆಗೆ ದೂರು ನೀಡಿದ್ದಾರೆ. ಇದರಿಂದ ಚಿತ್ರದ ಮೂವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
 
 
 
ಚಿತ್ರದ ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ ವಿರುದ್ಧ ಕೇಸ್ ದಾಖಲಾಗಿದೆ. ಮೂವರ ವಿರುದ್ಧ ಆರೋಪ ಸಾಬೀತಾದರೆ ಜೈಲು ಶಿಕ್ಷೆಯಾಗಲಿದೆ. ಐಪಿಸಿ ಸೆಕ್ಷನ್ 304-ಜಾಮೀನು ರಹಿತ ಪ್ರಕರಣ ಮತ್ತು 10 ವರ್ಷ ಜೈಲು ಅಥವಾ 10 ವರ್ಷ ಜೈಲು ಜತೆ ದಂಡ ವಿಧಿಸಲಾಗುತ್ತದೆ.
 
 
ಜಲಮಂಡಳಿ ಷರತ್ತು ಉಲ್ಲಂಘಿಸಿ ಚಿತ್ರೀಕರಣ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾರೆ12 ಷರತ್ತು ವಿಧಿಸಿ ಚಿತ್ರೀಕರಣಕ್ಕೆ ಜಲಮಂಡಳಿ ಅನುಮತಿ ನೀಡಿತ್ತು. ವೈಮಾನಿಕ ಚಿತ್ರೀಕರಣ ನಡೆಸದಂತೆ ಷರತ್ತು ವಿಧಿಸಲಾಗಿತ್ತು. ಷರತ್ತುಗಳನ್ನು ಉಲ್ಲಂಘಿಸಿರುವುದೇ ಅವಘಡಕ್ಕೆ ಕಾರಣವಾಗಿದೆ.ಚಿತ್ರ ತಂಡದ ವಿರುದ್ಧ ಕ್ರಮಕ್ಕೆ ಜಲಮಂಡಳಿಯಿಂದ ದೂರು ದಾಖಲಾಗಿದೆ.
 
ಹೆಜ್ಜೇನು ದಾಳಿ
ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಶೋಧ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ ನಡೆದಿದೆ. ಶೋಧ ಕಾರ್ಯ ವೀಕ್ಷಿಸಲು ಬಂದವರ ಮೇಲೆ ದಾಳಿ ನಡೆದಿದೆ. ಹೆಜ್ಜೇನು ದಾಳಿಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಇದರಿಂದ ಸಾರ್ವಜನಿಕರು ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.

LEAVE A REPLY

Please enter your comment!
Please enter your name here