ಜಯ ಆರೋಗ್ಯ ಮತ್ತಷ್ಟು ವಿಷಮ

0
188

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡು ಸಿಎಂ ಜೆ ಜಯಲಲಿತಾ ಅನಾರೋಗ್ಯ ಹಿನ್ನೆಲೆಯಲ್ಲಿ ಲಂಡನ್ ವೈದ್ಯರನ್ನು ಅಪೋಲೋ ವೈದ್ಯರು ಸಂಪರ್ಕಿಸಿದ್ದಾರೆ. ಜಯಲಲಿತಾ ಆರೋಗ್ಯದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.
 
 
 
ತಮಿಳುನಾಡು ಸಿಎಂ ಜೆ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇಸಿಎಂಒ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದೆ. ಇದರಿಂದ ಜಯಾ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ.
 
 
 
ಜಯಲಲಿತಾ ಆರೋಗ್ಯದ ಬಗ್ಗೆ ಹೆಲ್ತ್ ಬುಲೆಟಿನ್ ಪ್ರಸಾರ ಮಾಡಲಾಗಿದೆ. ಪ್ರಕಟಣೆಯನ್ನು ಅಪೋಲೋ ಆಸ್ಪತ್ರೆ ವೈದ್ಯರು ಬಿಡುಗಡೆ ಮಾಡಿದ್ದಾರೆ. ಜಯಾ ಆರೋಗ್ಯ ಮತ್ತಷ್ಟು ವಿಷಮಿಸಿದೆ ಎಂದು ಪ್ರಕಟಿಸಲಾಗಿದೆ. ಟಿವಿಯಲ್ಲಿ ಪ್ರಸಾರವಾದ ಸುದ್ದಿ ನೋಡಿ ಆಘಾತದಿಂದ ಸಾವು ಸಂಭವಿಸಿದೆ.
 
 
 
ಅಲ್ಲದೆ ಗ್ರಾಹಕರು ಚೆನ್ನೈ ನಗರದಲ್ಲಿ ದಿನಸಿ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಅಂಗಡಿಗಳ ಎದುರು ಸರತಿ ಸಾಲಲ್ಲಿ ನಿಂತು ವಸ್ತುಗಳ ಖರೀದಿ ಮಾಡಲಾಗುತ್ತಿದೆ. ಹಾಗೆಯೇ ಚೆನ್ನೈನ ಬಹುತೇಕ ಪೆಟ್ರೋಲ್ ಬಂಕ್ ಗಳು ಫುಲ್ ರಶ್ ಆಗಿದೆ. ಸಿಎಂ ಜಯಲಲಿತಾಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ.
ತಮಿಳುನಾಡಿನ ಕಾನೂನು ಸುವ್ಯವಸ್ಥೆಯ ತೊಡಕಿಲ್ಲ.

LEAVE A REPLY

Please enter your comment!
Please enter your name here