ಜಪಾನ್ ನಲ್ಲಿ ಪ್ರಬಲ ಭೂಕಂಪನ

0
232

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಶನಿವಾರ ಬೆಳಗ್ಗೆ ಜಪಾನ್ ನಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.3ರಷ್ಟು ದಾಖಲಾಗಿರುವುದಾಗಿದೆ ತಿಳಿದುಬಂದಿದೆ.
 
ಇಂದು ಬೆಳಿಗ್ಗೆ 1.25ರ ಸುಮಾರಿಗೆ ಭೂಕಂಪವಾಗಿದೆ. ಈಗಾಗಲೇ ಸುಮಾರು 22ಕ್ಕೂ ಹೆಚ್ಚು ಭಾರಿ ಭೂಮಿ ಕಂಪಸಿದ್ದು, ಜಪಾನ್ ಸಾಕಷ್ಟು ಹಾನಿಗೊಳಗಾಗಿರುವುದಾಗಿ ತಿಳಿದುಬಂದಿದೆ. ಭೂಕಂಪದ ಪರಿಣಾಮ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಎಂದು ಮೂಲಗಳು ತಿಳಿಸಿವೆ.
 
ಇನ್ನು ಭೂಕಂಪದ ಪರಿಣಾಮ ಅನೇಕ ಕಡೆ ಮನೆಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿವೆ. ಜಪಾನ್ ಅನೇಕ ರಸ್ತೆಗಳು ಬಂದ್ ಆಗಿವೆ. ಅಲ್ಲದೆ, ವಿದ್ಯುತ್ ಸಮಸ್ಯೆ ಎದುರಾಗಿದೆ.

LEAVE A REPLY

Please enter your comment!
Please enter your name here