ಜಪಾನ್ ನತ್ತ ಪ್ರಧಾನಿ

0
350

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ದಿನಗಳ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇಂದಿನಿಂದ ಪ್ರಧಾನಿಯವರ ಜಪಾನ್ ಪ್ರವಾಸ ಆರಂಭವಾಗಿದೆ. ಈ ಪ್ರವಾಸದ ವೇಳೆ ಉಭಯ ದೇಶಗಳು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
 
 
 
ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಅಪಾರ ನಿರೀಕ್ಷೆಗಳೊಂದಿಗೆ ಮೋದಿಯವರು ಇದೇ ಮೊದಲ ಬಾರಿಗೆ ಜಪಾನ್ ಗೆ ಭೇಟಿ ನೀಡುತ್ತಿದ್ದು, ತಂತ್ರಜ್ಞಾನ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಲಿದ್ದಾರೆ.
 
 
ಜಪಾನ್ ಗೆ ತೆರಳುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿಯವರು, ನಾನು ಮತ್ತು ಜಪಾನ್ ರಾಷ್ಟ್ರದ ಅಧಿಕಾರಿಗಳು ಒಟ್ಟಿಗೆ ಶಿನ್ಕಾನ್ಸೇನ್ ಬುಲೆಟ್ ರೈಲಿನಲ್ಲಿ ಕೊಬೆಗೆ ತೆರಳಲಿದ್ದೇವೆ. ಇದೇ ರೈಲಿನ ತಂತ್ರಜ್ಞಾನವನ್ನು ಮುಂಬೈ-ಅಹಮದಾಬಾದ್ ನ ಹೈಸ್ಪೀಡ್ ರೈಲಿಗೂ ಅಳವಡಿಸಲಾಗುತ್ತದೆ. ಕೈಗಾರಿಕೆಯಲ್ಲಿ ಸಾಕಷ್ಟು ಮುಂದುವರೆದಿರುವ ಹಾಗೂ ಸಕಲ ಸೌಕರ್ಯಗಳನ್ನು ಹೊಂದಿರುವುದಂತರ ಕೊಬೆಯ ಕವಾಸಕಿಗೂ ಭೇಟಿ ನೀಡಲಿದ್ದೇನೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here