ಜನಾಕರ್ಷಿಸುತ್ತಿರುವ ರಾಷ್ಟ್ರೀಯ ಕರಕುಶಲ ಮೇಳ

0
558

ಮ0ಗಳೂರು ಪ್ರತಿನಿಧಿ ವರದಿ
ಭಾರತ ಸರಕಾರದ ಜವಳಿ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಪಿಲಿಕುಳದ ಅರ್ಬನ್ ಹಾಥ್‍ನಲ್ಲಿ ಡಿ. 22 ರಿಂದ ಪ್ರಾರಂಭಗೊಂಡ ರಾಷ್ಟ್ರೀಯ ಕರಕುಶಲ ಮೇಳವು ಅಪಾರ ಜನಾಕರ್ಷಣೆ ಪಡೆಯುತ್ತಿದೆ.
 
 
ವೈವಿಧ್ಯಮಯ ಉತ್ಪನ್ನಗಳೊಂದಿಗೆ ದೇಶದ ನಾನಾ ಕಡೆಗಳಿಂದ ಆಗಮಿಸಿರುವ ಕುಶಲಕರ್ಮಿಗಳು ಅವರು ಉತ್ಪಾದಿಸಿದ ಟೆರಾಕೋಟಾ, ಕೈಯಲ್ಲೇ ತಯಾರಿಸಿದ ಬ್ಯಾಗುಗಳು, ಸ್ಪಟಿಕದ ವಿವಿಧ ಆಭರಣಗಳು, ಶರ್ಟ್‍ಗಳು, ಸೀರೆಗಳು, ದೋತಿ, ಸಲ್ವಾರುಗಳು, ಮಧುಬನಿ ಪೈಂಟಿಂಗ್, ಕಲ್ಲಿನ ಉತ್ಪನ್ನ, ಚೆನ್ನಪಟ್ಟಣದ ಬೊಂಬೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
 
 
 
ಈ ಕರಕುಶಲ ಮೇಳವು ಡಿಸೆಂಬರ್ 31 ರವರೆಗೆ ನಡೆಯಲಿದ್ದು, ನಂತರ ಜನವರಿ 6ರಿಂದ 15ರವರೆಗೆ ಪುನಃ ನಡೆಯಲಿದೆ. ನಾಗರಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಕರಕುಶಲ ಮೇಳದ ಸದುಪಯೋಗವನ್ನು ಪಡೆಯಲು ಪಿಲಿಕುಲ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here