ಜನಾಂದೋಲನ ಜಾಥಾ

0
620

 
ವರದಿ: ಸಂತೋಷ್ ಬಜಾಲ್
ಮುನ್ನೂರು ಗ್ರಾಮದ ಕೆಲವು ಪ್ರದೇಶದಲ್ಲಿ ಗಾಂಜಾ,ಅಫೀಮು ಮುಂತಾದ ನಿಷೇಧಿತ ಮಾದಕ ವಸ್ತುಗಳ ಹಾವಳಿ ವ್ಯಾಪಕವಾಗಿ ಹಬ್ಬುತ್ತಿದ್ದು, ಮುಗ್ಧ ವಯಸ್ಸಿನ ಎಳೆಯ ವಿದ್ಯಾರ್ಥಿಗಳನ್ನು,ಯುವಕರನ್ನು ಮಾದಕ ವ್ಯಸನಕ್ಕೆ ವ್ಯವಸ್ಥಿತವಾಗಿ ಸಿಲುಕಿಸಿ ಅದರ ದಾಸರನ್ನಾಗಿಸಿ ನಂತರ ಅದರ ವ್ಯವಹಾರ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ವ್ಯಸನಕ್ಕೆ ಬಲಿಬಿದ್ದ ಮಕ್ಕಳು ಕಳ್ಳತನ,ಕೊಲೆ,ಸುಲಿಗೆ,ದರೋಡೆ,ಅತ್ಯಾಚಾರ ಪ್ರಕರಣಕ್ಕೆ ಸಿಲುಕಿ ಸಮಾಜಘಾತುಕರಾಗುತ್ತಿದ್ದಾರೆ ಇದರ ವಿರುದ್ಧ DYFI ಮುನ್ನೂರು ಗ್ರಾಮದಾದ್ಯಂತ ಜನಾಂದೋಲನ ಜಾಥಾ ಮತ್ತು ಬೀದಿ ನಾಟಕವನ್ನು ಒ.23 ಆದಿತ್ಯವಾರ ಬೆಳಿಗ್ಗೆ 8.30ಕ್ಕೆ ಕುತ್ತಾರು ಜಂಕ್ಷನ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
 
ಉದ್ಘಾಟನೆಗೊಂಡ ಜಾಥಾ ಬೈಕ್ ರಾಲಿ ಮೂಲಕ ಸುಭಾಷ್ ನಗರ, ದೇಸೋಡಿ, ಸಂತೋಷ್ ನಗರ,ಪಂಡಿತ್ ಹೌಸ್, ಮದನಿನಗರ ನಂತರ ಕೊನೆಗೆ ತೇವುಲ ಪ್ರದೇಶದಲ್ಲಿ ಸಮಾರೋಪಗೊಳ್ಳಲಿದೆ. ಜಾಥಾದ ಉದ್ಘಾಟನೆಯನ್ನು DYFI ಜಿಲ್ಲಾಧ್ಯಕ್ಷರು, ಮ.ನ.ಪಾ.ದ ಸದಸ್ಯರಾದ ಶ್ರೀ ದಯಾನಂದ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಎಚ್.ಶಿವಪ್ರಕಾಶ್, ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕರಾದ ಅಶೋಕ್ ಪಜೀರು, ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಶ್ರೀ ಸುದೇಶ್ ಕೆ.ದೆರೆಬೈಲು, DYFI ಉಳ್ಳಾಲ ವಲಯ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, DYFI ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್, SFI ಜಿಲ್ಲಾಧ್ಯಕ್ಷರಾದ ನಿತಿನ್ ಕುತ್ತಾರ್ ಭಾಗವಹಿಸಲಿದ್ದಾರೆ.
 
 
 
ಗ್ರಾಮಾದಾದ್ಯಂತ ನಡೆಯುವ ಜನಾಂದೋಲನಕ್ಕೆ ಗ್ರಾಮದ ಜನರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿ, ಮುನ್ನೂರು ಗ್ರಾಮವನ್ನು ನಿಷೇದಿತ ಮಾದಕ ವಸ್ತು ಮುಕ್ತ ಗ್ರಾಮವನ್ನಾಗಿ ಮಾಡಲು ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ಪತ್ರಿಕಾ ಪ್ರಕಟನೆಯಲ್ಲಿ DYFI ಮುನ್ನೂರು ಗ್ರಾಮದ ಸಂಚಾಲಕರಾದ ಸುನೀಲ್ ತೇವುಲ, ಸಹ ಸಂಚಾಲಕರುಗಳಾದ ಭರತ್ ರಾಜ್ ಕೆ, ಸುರೇಶ್ ಪೂಜಾರಿ ತಲೆನೀರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here