ಜನವರಿ 26 ರಂದು ಎಡನೀರಿನಲ್ಲಿ ಭಾವಯಾನ – ಭಾವಗೀತೆ ಸ್ಪರ್ಧೆ

0
572

ನಮ್ಮ ಪ್ರತಿನಿಧಿ ವರದಿ
ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.) ಇದರ ಆಶ್ರಯದಲ್ಲಿ , ಬೆಂಗಳೂರು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಜನವರಿ 26 ರಂದು ಎಡನೀರಿನಲ್ಲಿ ಭಾವಯಾನ – ಭಾವಗೀತೆ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
 
 
ಬೆಳಗ್ಗೆ 9.30 ಕ್ಕೆ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷರಾಗಿರುವ ಜಯರಾಮ ಮಂಜತ್ತಾಯ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಕಾಸರಗೋಡು ಜಿಲ್ಲಾ ಮಟ್ಟದ ಭಾವಗೀತೆ ಸ್ಪರ್ಧೆ ನಡೆಯಲಿದೆ.
 
 
ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ನಡೆಸಲಾಗುವುದು. 1. 12 ವರ್ಷದ ಕೆಳಗಿನವರಿಗೆ . 2. 18 ವರ್ಷದ ಕೆಳಗಿನವರಿಗೆ . 3.18 ವರ್ಷದ ಮೇಲಿನವರಿಗೆ (ವಯೋಮಿತಿ ಇಲ್ಲ).
 
 
ಸಂಜೆ 5 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ಸಂಯೋಜಕಿ ಡಾ.ಮಹೇಶ್ವರಿ. ಯು. ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ವಿಶೇಷ ಅತಿಥಿಯಾಗಿ ಭಾಗವಹಿಸುವರು.
 
 
 
ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು , ಕಾಸರಗೋಡು ಪ್ರಸಾದ್ ಗ್ರೂಪ್ ಆಫ್ ಹೋಟೆಲ್ ನ ರಾಮಪ್ರಸಾದ್ ಕಾಸರಗೋಡು , ಸಾಹಿತಿ, ಅಂತರ್ಜಲ ಸಂಶೋಧಕ ಗಣಪತಿ ಭಟ್ ಮಧುರಕಾನನ ಅತಿಥಿಗಳಾಗಿ ಭಾಗವಹಿಸುವರು. 6 ಗಂಟೆಗೆ ಭೂಮಿಕಾ ಪ್ರತಿಷ್ಠಾನದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಭಾವ – ನೃತ್ಯ – ಯಾನ ನಡೆಯಲಿದೆ.
 
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಜನವರಿ 25 ರ ಒಳಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9447375191

LEAVE A REPLY

Please enter your comment!
Please enter your name here