ರಾಜ್ಯ

ಜನವರಿ  ೨೦ ಕ್ಕೆ ಕಾರ್ಕಳ ಗೊಮಟೇಶ್ವರ  ಬೆಟ್ಟದಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ.

ಅಜೆಕಾರು: ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆಯೆನಿಸಿರುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹತ್ತರ ಸಂಭ್ರಮ ಕಾರ್ಕಳದ ಐತಿಹಸಿಕ ಶ್ರೀ ಗೋಮಟೇಶ್ವರ ಬೆಟ್ಟದಲ್ಲಿ ಜನವರಿ ೨೦, ೨೦೧೯ ರ ಭಾನುವಾರ ನಡೆಯಲಿದೆ ಎಂದು ಸಮ್ಮೇಳನದ ರೂವಾರಿ, ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ,.
ವಿಶ್ವದ ಏಕೈಕ ಬೆಳದಿಂಗಳ ಸಾಹಿತ್ಯ ಸಮ್ಮೆಳನ ಎಂಬ ಖ್ಯಾತಿಗೆ ಪಾತ್ರವಾಗಿರುವ ಈ ಸಮ್ಮೇಳನದ ಹತ್ತರ ಸಂಭ್ರಮವನ್ನು ಪ್ರಸಿದ್ಧ ವಕೀಲ, ಕ್ಷೇತ್ರದ ಪ್ರಮುಖರಾಗಿರುವ ಎಂ.ಕೆ ವಿಜಯ ಕುಮಾರ್  ಅವರ ಸ್ವಾಗತಾಧ್ಯಕ್ಷತೆಯಲ್ಲಿ ತಯಾರಿ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ರಾಜಕೀಯ ಮುತ್ಸದ್ಧಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಸಮಾಜ ರತ್ನ ಕಡಂದಲೆ ಸುರೇಶ ಭಂಡಾರಿ, ಸಮಾಜ ಸೇವಾಸಕ್ತ ಡಾ. ಸಂತೋಷ ಕುಮಾರ್, ಜೋತಿಷಿ ಅರುಣ್ ಭಟ್ ಎಣ್ಣೆಹೊಳೆ ಮೊದಲಾದವರ ಗೌರವ ಅಧ್ಯಕ್ಷತೆ, ಪ್ರೋತ್ಸಾಹ-ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿಸಲು ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.
೩ ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಗೊಮಟೇಶ್ವರ ಸನ್ನಿಧಿಯಲ್ಲಿ ಡಾ.ಜಯಂತ ಕಾಯ್ಕಿಣಿ ಅವರ ಅಧ್ಯಕ್ಷತೆಯಲ್ಲಿ ಸಾರ್ಥಕವಾಗಿ ಸಂಪನ್ನಗೊಂಡಿತ್ತು. ಅಧ್ಯಕ್ಷರು, ಅತಿಥಿಗಳು ಮತ್ತು ಸಾಧಕರನ್ನು ಆಹ್ವಾನಿಸುವ ಕೆಲಸಗಳು ನಡೆಯುತ್ತಿವೆ ಎಂದಿದ್ದಾರೆ.

Comment here