ಜನರೇ ಜಾಗೃತರಾಗಿ: ಭಟ್ಟಾರಕ ಶ್ರೀ ಕರೆ

0
944


ಮೂಡುಬಿದಿರೆ: ಕೊರೊನಾ ಮಹಾಮಾರಿ ಇಡೀ ದೇಶದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿದ್ದು ಈ ಕುರಿತು ಜನತೆ ಜಾಗೃತರಾಗಬೇಕೆಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಇದೀಗ ಕೋವಿಡ್ 19 ವ್ಯಾಪಕ ವಾಗಿ ಹರಡುತ್ತಿದ್ದು ಸಮಸ್ತ ಸಮುದಾಯದ ಎಲ್ಲಾ ಸದಸ್ಯರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ನಿಯಮಗಳನ್ನು ತಿಳಿಸಿದ್ದು ಇದನ್ನು ಕಟ್ಟುನಿಟ್ಟಿನಿಂದ ಪ್ರತಿಯೊಬ್ಬರು ಪಾಲಿಸಬೇಕೆಂದು ಕರೆನೀಡಿದ್ದಾರೆ.
ದೇಶದ ನಾನಾ ಭಾಗಗಳಿಂದ ಬಂದ ನಮ್ಮ ನಾಡಿನ ಎಲ್ಲಾ ಹಿರಿಯ ಕಿರಿಯ ಸದಸ್ಯರು ಕ್ವಾರಂಟೈನ್ ನಿಯಮಾವಳಿ ಕಡ್ಡಾಯವಾಗಿ ಪಾಲನೆ ಮಾಡುದು ಸೇರಿದಂತೆ ಸಾಮಾಜಿ ಅಂತರ ವನ್ನು ಕಾಯುವಂತೆ ಕರೆನೀಡಿದ್ದಾರೆ. ವ್ಯಕ್ತಿಗಳು ಅನವಶ್ಯಕವಾಗಿ ಹೊರಗಡೆ ತಿರುಗಾಡಬಾರದು ಮತ್ತು ಹೊರ ಹೋಗುವ ಸಂದರ್ಭ ಖಡ್ಡಾಯ ಮಾಸ್ಕ್‌ ಧರಿಸುವಂತೆ ಕರೆನೀಡಿದ್ದಾರೆ. ಸರಕಾರ ನೀಡಿದ ಮುಂಜಾಗರೋಕತೆಯನ್ನು ಪಾಲಿಸುವ ಜೊತೆಗೆ ಮತ್ತೊಮ್ಮೆ ಜನತಾ ಕರ್ಫ್ಯೂವನ್ನು ಸ್ವಯಂ ಪ್ರೇರಿತರಾಗಿ ನಾವೇ ಆಚರಿಸೋಣ ಎಂದು ಕರೆನೀಡಿದ್ದಾರೆ.

LEAVE A REPLY

Please enter your comment!
Please enter your name here