ಜನರಿಗೆ ಉತ್ತಮ ಸುದ್ದಿ ಅತ್ಯಗತ್ಯ

0
191

 
ವರದಿ-ಚಿತ್ರ: ಕವನ.ಜಿ.ಸಕಲೇಶಪುರ
ಪತ್ರಿಕೆಯಲ್ಲಿ ಬರೆಯಬೇಕಾದರೆ ಅದಕ್ಕೆ ಮೊದಲು ಓದುವ ಹವ್ಯಾಸ ಇರಬೇಕು. ಬರವಣಿಗೆಯಲ್ಲಿನ ತಪ್ಪನ್ನು ಕಂಡುಹಿಡಿದು ನಂತರ ಸರಿಯಾಗಿ ಬರೆಯಬೇಕು. ಮಾದ್ಯಮದಲ್ಲಿ ಪತ್ರಕರ್ತರು ತಮ್ಮ ಸಿದ್ಧಾಂತವನ್ನು ಅಳವಡಿಸುವಂತಿಲ್ಲ. ಪತ್ರಿಕೆಯ ನಿಯಮದಂತೆ ನಡೆಯಬೇಕಾಗುತ್ತದೆ. ಯಾವುದೇ ವಿಷಯಕ್ಕೂ ಬದ್ಧರಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ನ ಪತ್ರಕರ್ತ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಅಕ್ರಮ್ ನುಡಿದರು.
 
ಇತ್ತೀಚೆಗೆ ಉಜಿರೆಯ ಶ್ರೀ.ಧ.ಮಂ. ಕಾಲೇಜಿನ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿಗಳ ತರಗತಿಗೆ ಭೆಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದರು.
ಪತ್ರಕರ್ತನಿಗೆ ಜನಸಂಪರ್ಕ ಅತ್ಯಗತ್ಯ ವರದಿ ಮಾಡುವುದು ಸುಲಭವಲ್ಲ ಘಟನೆಯ ಸ್ಥಳಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಮನಗೊಂಡ ನಂತರ ವರದಿ ಮಾಡಬೇಕು. ಜನ ಮಾದ್ಯಮವನ್ನು ನಂಬಿದ್ದಾರೆ ಆದ್ದರಿಂದ ಅವರಿಗೆ ಸರಿಯಾದ ಹಾಗೂ ಸತ್ಯಸಂಗತಿಗಳನ್ನೇ ನೀಡಬೇಕು ಎಂದು ತಿಳಿಸಿದರು.
 
 
ವರದಿ ಬರೆಯುವುದರಲ್ಲಿ ಪಳಗಿದ್ದರೆ ಡೆಸ್ಕ್ ನಲ್ಲೇ ಕೂತು ವರದಿ ತಯಾರಿ ಮಾಡಬಹುದು. ಟಿ.ವಿ.ಯಲ್ಲಿ ವರದಿಗಾರರು ಚಿತ್ರಸಹಿತ ಮಾಹಿತಿಯನ್ನು ಜನರಿಗೆ ತಲುಪಿಸುವುದರಿಂದ ದೃಶ್ಯಮಾದ್ಯಮ ಜನರಿಗೆ ಹತ್ತಿರವಾಗುತ್ತದೆ. ಮಾಧ್ಯಮದಲ್ಲಿ ತಮಾಷೆ ಸುದ್ದಿ ನೀಡುವುದಕ್ಕೂ ಪ್ರಾಮುಖ್ಯತೆ ಇದೆ. ಸುದ್ದಿ ಜನರ ಮನಮುಟ್ಟುವಂತಿರಬೇಕು ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಸುನಿಲ್ ಹೆಗ್ಡೆ ಹಾಗೂ ಶೃತಿ ಜೈನ್ ಉಪಸ್ಥಿತರಿದ್ದರು. ಪ್ರಮೀಳಾ ವಂದಿಸಿದರು. ಪ್ರಥಮ ಹಾಗೂ ಅಂತಿಮ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here