ಜನಪದ ಕಲೆ ಭೂತಾರಾಧನೆ

0
447

 
ಭೂತಕೋಲ ಎನ್ನುವುದು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜಾನಪದ ಧಾರ್ಮಿಕ ಆಚರಣೆ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇದರಲ್ಲಿ ಹಲವು ನಮೂನೆಗಳಿವೆ. ಇದರಲ್ಲಿ ಸಾಮಾನ್ಯವಾಗಿ ದೈವ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯ ಆರಾಧನೆ ನಡೆಯುತ್ತದೆ. ಹಲವು ಹೆಸರಿನ ದೈವಗಳಿವೆ. ಉದಾಹರಣೆಗೆ ಕಲ್ಕುಡ, ಕಲ್ಲುರ್ಟಿ, ಪಂಜುರ್ಳಿ, ಪಿಲಿಫೂತ, ಪಿಲಿಚಾಮುಂಡಿ, ಬೊಬ್ಬರ್ಯ, ಜುಮಾದಿ, ಧೂಮಾವತಿ (ಬಬ್ಬು), ವಿಷ್ಣುಮೂರ್ತಿ, ಕೋಟಿಚೆನ್ನಯ ಮೊದಲಾದವುಗಳು. ಭೂತಕೋಲ ಎನ್ನುವುದು ಭೂತಾರಾಧನೆಯ ಒಂದು ಪ್ರಮುಖ ಅಂಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ   ಮೂಡಬಿದಿರೆ ಸಮೀಪದ ಮಾರೂರಿನಲ್ಲಿ ನಡೆದ ಮಂತ್ರದೇವತೆ ಭೂತ-ಕೋಲದ ದೃಶ್ಯ  ಇದು.
ಚಿತ್ರ: ಅನಿತ್ ಕುಮಾರ್ 
bhuth_ kola_vaarte
bhuth_ kola_vaarte1

LEAVE A REPLY

Please enter your comment!
Please enter your name here