ಮಂಗಳೂರು/ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜನತಾ ಕರ್ಫ್ಯೂ ಅನಿವಾರ್ಯ ಎಂಬಂತಾಗಿದೆ. ವಿದೇಶದಿಂದ ಬಂದ ಹಲವು ಮಂದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದು ಮೂಡುಬಿದರೆಯೂ ಸೇರಿದಂತೆ ಆಸುಪಾಸಿನ ಪರಿಸರದಲ್ಲಿ ರೋಗ ಲಕ್ಷಣದವರಿದ್ದಾರೆ ಎಂಬ ಮಾಹಿತಿ ಇದೀಗ ದಟ್ಟವಾಗಿ ಹಬ್ಬಲಾರಂಭಿಸಿದೆ. ಕೊರೊನಾ ಸೋಂಕ ಜಿಲ್ಲೆಯಲ್ಲಿ ಈಗಾಗಲೇ ದೃಢವಾಗಿದ್ದು ಇದೀಗ ಮೂಡುಬಿದಿರೆ ಪರಿಸರಕ್ಕೆ ವ್ಯಾಪಿಸದರೆ ದೊಡ್ಡ ಅನಾಹುತವೇ ಆಗುವುದರಲ್ಲಿ ಸಂದೇಹವೇ ಇಲ್ಲ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂ ಇನ್ನೊಂದಷ್ಟು ದಿನ ಮುಂದುವರಿಸುವ ಅನಿವಾರ್ಯತೆ ಬಂದೊದಗಿದೆ. ಸೋಂಕು ಪೀಡಿತರು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸದೆ ಇರುವುದೇ ಈ ಸೋಂಕು ಪಸರಿಸಲು ಕಾರಣವೆನ್ನಲಾಗುತ್ತಿದೆ. ಜನ ನಿಬಿಡ ಪ್ರದೇಶಗಳು, ಜಾತ್ರೆ ಉತ್ಸವಾದಿಗಳಲ್ಲಿ, ಸೆಲೂನ್, ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್ ಗಳಲ್ಲಿ ತೆರಳಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಜನ ಮನೆ ಬಿಟ್ಟು ಹೊರಬಾರದಿರುವುದೇ ಲೇಸು ಎಂಬಂತ ಸ್ಥಿತಿ ಬಂದೊದಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಲಾಕ್ ಡೌನ್ ಹಿನ್ನೆಲೆ– ಜನತೆ ಯೋಚಿಸಿ
ಹಾಲು, ಮೊಸರು, ಪೇಪರ್, ಮೆಡಿಕಲ್, ಆಸ್ಪತ್ರೆ ಮತ್ತು ದಿನಸಿ, ಬ್ಯಾಂಕ್, ಮಾಂಸ, ಪೆಟ್ರೋಲ್ ಪಂಪ್ ಸೇರಿ ಅಗತ್ಯ ವಸ್ತುಗಳು ಲಭ್ಯವಿದೆ. ಹೊಟೇಲ್ ನಿಂದ ಪಾರ್ಸೆಲ್ ಗೆ ಮಾತ್ರ ಅವಕಾಶ. ಇವೆಲ್ಲವೂ ನಗರ ಹಾಗೂ ಕೇಂದ್ರ ಪ್ರದೇಶಕ್ಕೆ ಅನ್ವಯವಾಗುತ್ತದೆ.
ದ.ಕ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಸ್ಥಗಿತವಾಗಲಿದೆ. ಸರ್ಕಾರಿ ಬಸ್ ಸೇವೆಯೂ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಚಿತ್ರಮಂದಿರ, ದಿನಸಿ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟು ಬಂದ್. ಮೀನುಗಾರಿಕೆ, ಪ್ರವಾಸೋದ್ಯಮ, ದೇವಸ್ಥಾನ ಸಂಪೂರ್ಣ ಬಂದ್. ರಸ್ತೆಯಲ್ಲಿ ವಾಹನ ಓಡಾಟ, ಮನೆಯಿಂದ ಜನರ ಹೊರಬರುವಿಕೆಗೆ ಬ್ರೇಕ್. ಶಾಲಾ-ಕಾಲೇಜು ಸಂಪೂರ್ಣ ಬಂದ್, ಸರ್ಕಾರಿ ಕಚೇರಿ ಸಾರ್ವಜನಿಕ ಪ್ರವೇಶ ನಿಷೇಧ. ಹೊಟೇಲ್, ರೆಸ್ಟೋರೆಂಟ್, ಪಬ್, ಪೆಟ್ರೋಲ್ ಪಂಪ್ ಸೇರಿ ಮದ್ಯ ಮಾರಾಟವೂ ಬಂದ್ .