ಜಂಬೂ ಸವಾರಿಗೆ ಸಕಲ ಸಿದ್ಧತೆ

0
343

 
ಮೈಸೂರು ಪ್ರತಿನಿಧಿ ವರದಿ
ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ವೈಭವ ಮುಗಿಲುಮುಟ್ಟಿದೆ. ಜಂಬೂಸವಾರಿಗಾಗಿ ಭರ್ಜರಿ ತಾಲೀಮು ನಡೆಯುತ್ತಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಇನ್ನೂ 3 ದಿನ ಮಾತ್ರ ಬಾಕಿ ಇದೆ.
 
 
ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ತಾಲೀಮಿಗೆ ಚಾಲನೆ ನೀಡಲಾಗಿದೆ. ಅರಮನೆಯ ಆವರಣದಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಮುಂಭಾಗ ಪೂರ್ವ ತಾಲೀಮು ನಡೆದಿದೆ. ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ಸೇರಿದಂತೆ ದಸರೆಯ ಎಲ್ಲಾ ಆನೆಗಳೂ ಕೂಡ ತಾಲೀಮಿನಲ್ಲಿ ಭಾಗಿಯಾಗಿದೆ.
 
 
ಪೊಲೀಸ್ ಇಲಾಖೆಯ ವಿವಿಧ ತುಕಡಿಗಳು, ಅಶ್ವಾರೋಹಿ ದಳ, ಸಶಸ್ತ್ರದಳದ ಸಿಬ್ಬಂದಿ ಸೇರಿದಂತೆ ವಿವಿಧ ಪಡೆಗಳಿಂದ ಮೆರವಣಿಗೆಗಾಗಿ ತಾಲೀಮು ನಡೆಯುತ್ತಿದೆ. ಆರಮನೆ ಆವರಣದಲ್ಲಿ ಮಾವುತರಿಗೆ ತರಬೇತಿ ನಡೆಯುತ್ತಿದೆ.
 
ಗಾಜುಗಳು ಪುಡಿಪುಡಿ
ತಾಲೀಮು ವೇಳೆ ಕುಶಾಲತೋಪು ಸಿಡತಕ್ಕೆ ಗಾಜುಗಳು ಪುಡಿಪುಡಿಯಾಗಿದೆ. ಜಂಬೂಸವಾರಿ ಮೆರವಣಿಗೆಯ ತಾಲೀಮಿನ ವೇಳೆ ಘಟನೆ ನಡೆದಿದೆ. ಮೈಸೂರು ಅರಮನೆಯ ವಾಹನ ನಿಲುಗಡೆ ಆವರಣದಲ್ಲಿರುವ ಶುಲ್ಕವಸೂಲಿ ಮಾಡುವ ಕಟ್ಟಡದ ಗಾಜುಗಳು ಪುಡಿಪಡಿಯಾಗಿದೆ.
ಕುಶಾಲತೋಪು ಸಿಡಿತ ವೇಳೆ ಹೊರಹೊಮ್ಮಿದ ಸದ್ದಿಗೆ ಪುಡಿಯಾಗಿದೆ. ಪೂರ್ವ ತಾಲೀಮಿನ ವೇಳೆ 21ಬಾರಿ ಕುಶಾಲತೋಪು ಸಿಡಿಸಲಾಗಿದೆ. ಮೈಸೂರು ಅರಮನೆ ಹೊರಾವರಣದಲ್ಲಿರುವ ಕೋಟೆಮಾರಮ್ಮನ ದೇಗುಲದ ಬಳಿ ಸಶಸ್ತ್ರ ಮೀಸಲುಪಡೆ ಸಿಬ್ಬಂದಿಯಿಂದ ಕುಶಾಲತೋಪು ಸಿಡಿತವಾಗಿತ್ತು. ಮೀಸಲು ಪಡೆಯ 30 ಸಿಬ್ಬಂದಿಗಳು ಕುಶಾಲತೋಪು ಸಿಡಿಸಿದ್ದಾರೆ.ಕುಶಾಲಸಿಡಿತ ನೋಡುಗರ ಎದೆ ಝಲ್ಲೆನಿಸಿದೆ.
 

LEAVE A REPLY

Please enter your comment!
Please enter your name here