ಜಂಬೂ ಸವಾರಿಗೆ ಕ್ಷಣಗಣನೆ

0
584

ಮೈಸೂರು ಪ್ರತಿನಿಧಿ ವರದಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 406ನೇ ದಸರಾ ವೈಭವ ಎದ್ದು ಕಾಣುತ್ತಿದೆ.
 
 
 
ಇಂದು ವಿಜಯದಶಮಿ ದಿನವಾಗಿದ್ದು, ಐತಿಹಾಸಿಕ ಜಂಬೂಸವಾರಿ ನಡೆಯಲಿದೆ. ಜಂಬೂಸವಾರ ಮೆರವಣಿಗೆಗೆ ಮೈಸೂರಿನ ಅರಮನೆ ಆವರಣದಲ್ಲಿ ಭರದ ಸಿದ್ಧತೆ ಮಾಡಲಾಗಿದೆ. ಇದಕ್ಕಾಗಿ ಮೈಸೂರು ನಗರ ನವವಧುವಿನಂತೆ ಸಿಂಗಾರಗೊಂಡಿದೆ.
 
 
 
 
ಜಂಬೂ ಸವಾರಿಯಲ್ಲಿ ತುಂಟ ಆನೆ ಅರ್ಜುನ 5ನೇ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. 750 ಕೆಜಿ ತೂಕವಿರುವ ಐತಿಹಾಸಿಕ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವಿರಲಿದೆ.
 
 
 
ಇಂದು ಮಧ್ಯಾಹ್ನ 2.16ಕ್ಕೆ ಶುಭ ಮಕರ ಲಗ್ನದಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಕೆಯಾಗಲಿದೆ. ಮಧ್ಯಾಹ್ನ 2.45ಕ್ಕೆ ಒಳಾವರಣದಲ್ಲಿ ಪುಷ್ಪಾರ್ಚನೆ ನಡೆಯಲಿದೆ. ನಾಡಿನ ಅಧಿದೇವತೆ ಚಾಮುಂಡಿಗೆ ಸಿಎಂ ನಮಿಸಲಿದ್ದಾರೆ. ಬಳಿಕ ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ಚಾಲನೆ ನೀಡಲಾಗುತ್ತದೆ. ಚಿನ್ನ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಆನೆ ಅರ್ಜುನ ಸಾಗಲಿದ್ದಾನೆ. ಬನ್ನಿಮಂಟಪದವರೆಗೆ ಐತಿಹಾಸಿಕ ಮೆರವಣಿಗೆ ಸಾಗಲಿದೆ.
 
 
ಅರ್ಜುನನ ಬಗ್ಗೆ ಒಂದಿಷ್ಟು
ಅಂಬಾರಿ ಹೊತ್ತು ಸಾಗಲು ಆನೆ ಅರ್ಜುನ ಸಿದ್ಧನಾಗಿದ್ದಾನೆ. ಮಧುಮಗನಂತೆ ಅರ್ಜುನ ಕಂಗೊಳಿಸುತ್ತಿದ್ದಾನೆ. ಆತನ ಮೈಮೇಲೆ ಕಲಾವಿದರು ಬಣ್ಣದ ಕುಂಚದಿಂದ ಚಿತ್ರಗಳನ್ನು ಬಿಡಿಸಿ, ಆತನನ್ನು ಸಿಂಗಾರಿಸುತ್ತಿದ್ದಾರೆ. ಆತನ ಮೈಮೇಲೆ ಬಗೆಬಗೆಯ ಚಿತ್ತಾರ ಅರಳಿದೆ. ಅರ್ಜುನ ಆನೆಗಾಗಿ ವಿಶೇಷ ಆಹಾರಗಳನ್ನು ಸಿದ್ಧಪಡಿಸಲಾಗಿದೆ. 500 ಕೆ ಜಿ ಹುಲ್ಲಿನ ತಿನಿಸು ತಯಾರಿಗಿದೆ.
 
 
 
ಸ್ತಬ್ಧಚಿತ್ರಗಳ ದಸರಾ
ಜಂಬೂ ಸವಾರಿಗೆ ಸ್ತಬ್ಧಚಿತ್ರಗಳು ಮತ್ತೊಂದು ಅತ್ಯಾಕರ್ಷಣೆಯಾಗಿದೆ. ಈ ಬಾರಿ ಜಂಬೂ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಯ ಒಟ್ಟು 46 ಸ್ತಬ್ಧಚಿತ್ರಗಳು ಜನಮನ ಸೆಳೆಯಲಿದೆ.
ವಿವಿಧ ರೀತಿಯ ಸ್ತಬ್ಧಚಿತ್ರಗಳು ಮೆರವಣಿಗೆ ಪಾಲ್ಗೊಳ್ಳಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ. ದಕ್ಷಿಣ ಕನ್ನಡದಿಂದ ರಾಣಿ ಅಬ್ಬಕ್ಕನವರ ಪ್ರತಿಮೆ ಹೊಂದಿದ್ದ ಸ್ತಬ್ಧ ಚಿತ್ರಣವಿದೆ. ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಡಿಫರೆಂಟ್ ಶೈಲಿ, ವಿಭಿನ್ನ ವಿನ್ಯಾಸಗಳ ಅನಾವರಣವಾಗಲಿದೆ.
 
 
 
 
ಖಾಕಿ ಕಣ್ಗಾವಲು
ಜಂಬೂ ಸವಾರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಖಾಕಿ ಕಣ್ಗಾವಲು ಹಾಕಲಾಗಿದೆ. ನಗರದಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅರಮನೆ ಸೇರಿದಂತೆ ನಗರದಾದ್ಯಂತ ಭದ್ರತೆಗೆ ನಿಯೋಜಿಸಲಾಗಿದೆ. ಮೈಸೂರಿನ ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು ಇದೆ. ಮೆರವಣಿಗೆ ಸಾಗುವ ದಾರಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

LEAVE A REPLY

Please enter your comment!
Please enter your name here