ಛಾಯಾಗ್ರಹಣ ಒಂದು ಮಾಯಲೋಕ

0
873


ಭಾಗ-೧೧: ಎಂ.ದೇವಾನಂದ ಭಟ್, ಬೆಳುವಾಯಿ
ಹಿಂದೊಂದು ಕಾಲದಲ್ಲಿ ಎಲ್ಲ ಕಲಾವಿದರಿಗೂ ರಾಜಶ್ರಯವಿತ್ತು. ರಾಜ ಮನೆತನದ ಪ್ರತಿಷ್ಠಿತ ವ್ಯಕ್ತಿಗಳ ಭಾವಚಿತ್ರವನ್ನು ಶ್ರೇಷ್ಠ ಚಿತ್ರಕಾರರಿಂದ ಬರೆಸುತ್ತಿದ್ದರು.ಅದು ಬದುಕಿದ್ದಾಗಲೇ ಸುವರ್ಣಪುತ್ಥಳಿಯ ಪ್ರತಿಮೆಗಳನ್ನು ಶಿಲ್ಪಿಗಳಿಂದ ನಿರ್ಮಿಸಿಕೊಳ್ಳುತ್ತಿದ್ದರು. ಕಾಲಕ್ರಮೇಣ ಮೇಲ್ಪಂಕ್ತಿಯ ವ್ಯಕ್ತಿಗಳಿಂದ ನಿಧಾನಕ್ಕೆ ಕೆಳಮುಖವಾಗಿಯೂ ಹರಿಯ ತೊಡಗಿತು. ಶ್ರೀಮಂತ ವರ್ತಕರು ಕೂಡ ತಮ್ಮತಮ್ಮ ಛಾಯಾಚಿತ್ರ ಗಳನ್ನು ಬರೆಸಿಕೊಳ್ಳತೊಡಗಿದರು. ಇಂತಹ ಆನೇಕ ಸಂಗತಿಗಳು ಪರಿವರ್ತನಾ ಪ್ರಪಂಚದಲ್ಲಿ ಆಧುನಿಕತೆಯತ್ತ ತೆರೆದುಕೊಳ್ಳಲಾರಂಭಿಸಿತು.
ಹೀಗೆ ತನ್ನ ಕ್ಷೇತ್ರದ ಬೆಳವಣಿಗೆ ಮತ್ತು ಆಕರ್ಷಣೆ, ಸಿದ್ದಿ ಪ್ರಸಿದ್ಧಿಯ ವೇಗ ಹೆಚ್ಚುತ್ತ ಸಾಗಿತು ಈ ಛಾಯಾಚಿತ್ರದ ಮಾಯಾಲೋಕ.
ಒಂದು ಕಾಲವಿತ್ತು ಪಾಶ್ಚಾತ್ಯರ ಪ್ರಭಾವ,ದೇಶಿಯರ ತಿಲಗಾತ್ರದ ಪರಿಶ್ರಮದ ಪ್ರತೀಕವಾಗಿ ನಮ್ಮಲ್ಲೂ ಸ್ವಂತ ಚಲನರಹಿತ ಕೆಮರಗಳು ಅಲ್ಲೋ ಇಲ್ಲೋ ಕಾಣಿಸಿ ಕೊಂಡಾಗ ಜನ ಗಾಬರಿ ಗೊಂಡದ್ದು ಇದೇ ಇದು ಯಾವ ಪೆಡಂಭೂತ ಮಾರಾಯರ್ರೆ…ಇದೊಂದು ಮುಂದೆ ಮನುಕುಲಕ್ಕೆ ಕೇಡು ಬೇರೆ ಎಂದು ಗುನುಗುತ್ತಿದ್ದ ಜನ ಅಗತ್ಯಕ್ಕಾಗಿ ….ನೋಡು ಮಹಾರಾಯ ಯಾವುದಕ್ಕೋ ಒಂದರ್ಧ ಪೋಟೊ ತೆಗೆದು ಬಿಡು ಎಂದು ಛಾಯಾಚಿತ್ರ ಗಾರನ ಬೆನ್ನುಹತ್ತಿದ್ದುಇದೆ. ಆ ದಿನಗಳಲ್ಲಿ ಬದುಕ್ಕಿದ್ದ ವ್ಯಕ್ತಿಯ ಪೋಟೊ ಕೆಲವೊಮ್ಮೆ ಅವರ ಮರಣಮಂಟಪಕ್ಕು ಸಿದ್ದರೂಪಗೊಳ್ಳುವುದು ಕಷ್ಟಸಾದ್ಯವಾಗಿತ್ತು. ಕಾರಣ ಕೆಮರಮ್ಯಾನ್ ಕೆಲಸ ಭಾವಚಿತ್ರ ಒದಗಿಸುವುದು ಅಷ್ಟೇ ಆಗಿತ್ತು. ಸಮಯದ ಮಿತಿಯನ್ನು ಮೀರಿತ್ತು. ಆದರೂ ಜನ ಎಲ್ಲವನ್ನೂ ಸಹಿಸಿ ಕೊಳ್ಳುತ್ತಿದ್ದರು.ಅಂದಿನ ಜನ ತಾಳ್ಮೆಯಿಂದ ವ್ಯವಹರಿಸುತ್ತಿದ್ದರು.
ಈಗಿನಂತೆ ಬ್ಯಾಂಕ್ ಮ್ಯಾನೇಜರ್….. ಓಡಿ ಹೋಗಿ ನಿಮ್ಮ ಎರಡು ಕ್ವಾಪಿ ಫೋಟೊ ತನ್ನಿ. ಈಗಾಲೇ ನಿಮಗೆ ಹತ್ತು ಲಕ್ಷ ಸ್ಯಾಂಕ್ಷನ್ ಮಾಡುತ್ತೇನೆ ಎಂದಾಗ ಆ ಗ್ರಾಹಕ ಬಂದು ಫೋಟೊ ಗ್ರಾಫರನ ಎದೆಯಲ್ಲೆ ಕೂತು ಬಿಡುತ್ತಾನೆ.ಈಗಾಲೇ ಬೇಕು ಇಲ್ಲವಾದಲ್ಲಿ ನನ್ನ ಎಲ್ಲಾ ಯೋಜನೆಗಳು ಹಾಳಾಗುವುದು ಎಂದು. ಆಗ ಅಲ್ಲಿ ಕ್ವಾಲಿಟಿ ಬಗ್ಗೆ ಯಾರು ತಲೆಕೆಡಿಸುವುದೆ ಇಲ್ಲ.ಒಮ್ಮೆಗೆ ಆದರೆ ಮುಗಿಯಿತು…..ಮತ್ತೆ ಆ ಫೋಟೊದ ಮುಖದ ಮೇಲೆ ಹ್ಯಾಗು ಸೀಲ್ ಹೊಡಿತಾರೆ ಎಂದು ಮೊದಲೇ ತಿಳಿದ ಗ್ರಾಹಕ ಒಮ್ಮೆ ಕೋಡಿ ಎಂದು ಕೂಗುತ್ತಲೆ ತಿಂಗಳು ಮೂರು ಕಳೆದರೂ ಅವನ ಲೊನ್ ಪೇಪರ್ ಬಗ್ಗೆ ಅಗತ್ಯದ ದಾಖಲೆಪತ್ರ ಸಂಗ್ರಹಣೆಯಲ್ಲೇ ತಿರುಗುತ್ತಾ ಇರುತ್ತಾನೆ.
ಇದೆಲ್ಲದರ ಜೊತೆ ಈಗ ಅಂತೂ ಸರಕಾರಿ ಕಛೇರಿಗಳಲ್ಲಿ ಅಲ್ಲೆ ಕ್ಯಾಮರಗಳು.ಅದನ್ನು ಕ್ಲಿಕ್ ಮಾಡಿ ಭಾವಚಿತ್ರ ನೀಡುವ ವ್ಯಕ್ತಿ ಬಹಳ ಸಾಧಕನಂತೆ ಎಲ್ಲರ ಎದುರು ಹಾ….ಸರಿ, ಇಲ್ಲೆ ನೋಡಿ.ಕಣ್ಣು ಮುಚ್ಚಬೇಡಿ ಎಂದೆಲ್ಲ ಗುಣುಗುತ್ತಾ ಫೋಟೊ ತೆಗೆಸಿಕೊಳ್ಳುವ ವ್ಯಕ್ತಿಗೆ ಕಡೆಗಾದರು ಕೊಡುವ ಫೋಟೊ ಕಪ್ಪು ಕಪ್ಪಾಗಿ ಅವನಿಗೆ ಗುರುತು ಸಿಗದಷ್ಟು, ಅವನದ್ದೋ ಅಥವಾ ಅವನ‌ ತಂದೆಯದ್ದೋ ಎಂಬಲ್ಲಿಯವರೆಗೆ ಅವನಿಗೆ ಸಂಶಯ ಬರುವಂತೆ (ನಿಮ್ಮಆಧಾರ್ ಕಾರ್ಡ್,ವೊಟರ್ ಐ.ಡಿ ಯಲ್ಲಿ ಇರುವ ಪೋಟೊದಂತೆ) ಕೊನೆಯಲ್ಲಿ ಆ ಕಚೇರಿಯ ಫೋಟೊ ತೆಗೆಯುವ ವ್ಯಕ್ತಿಗೆ ಹತ್ತಾರು ಜನಗಳ ಸಾವಿರಾರು ತರದ ಬೈಗುಳಗಳೇ ಅವನ ನಿತ್ಯದ ಪ್ರಶಸ್ತಿ ಪತ್ರವಾಗುವಂತೆ …ಇದೆಲ್ಲ ನಿತ್ಯದ ಗೋಳು. ಉಳ್ಳವರಿಗೆ ಪ್ರತಿಷ್ಟೆಯ ಪ್ರಶ್ನೆ. ಇಲ್ಲದವರಿಗೆ ಮರ್ಯಾದೆಯ ಪ್ರಶ್ನೆ…. ಅದಕ್ಕೆ ಸರಿಯಾಗಿ ತನ್ನ ಕಿಸೆಯಲ್ಲೇ ಇಡೀ ಪ್ರಪಂಚವನ್ನೇ ಸೆರೆ ಹಿಡಿದಿಟ್ಟುಕೊಳ್ಳುವ ಅಂಗೈಅಗಲದ ಪೆಟ್ಟಿಗೆ (ಮೊಬೈಲ್) ನಮಗೆ ಏನೆಲ್ಲವನ್ನು ಕೊಡಬಹುದು ಎಂಬುದನ್ನು ಊಹಿಸಲಸಾದ್ಯ, ಹೀಗಿರುತ್ತಾ ಒಬ್ಬ ಯೋಗ್ಯ ಪೋಟೊ ಗ್ರಾಫರ್ ಬಹಳ ಅಲೋಚಿಸ ಬೇಕಾದ್ದು ಈ ಕಾಲಘಟ್ಟದಲ್ಲಿ ತನ್ನ ವ್ಯವಹಾರ ಮುನ್ನಡೆಸಬೇಕಾದ ಪ್ರಸಂಗವನ್ನು.
ಜನ ಇಂದ್ದಲ್ಲ ನಾಳೆ ಸರಿ ಹೊಂದಿಕೊಳ್ಳುತ್ತಾರೆ ಎಂಬ ಭರವಸೆ ಇದ್ದರೂ…. ಆನೇಕ ವಿಚಾರಗಳನ್ನು ಇನ್ನೊಬ್ಬನ ತಲೆಗೆ ತುಂಬುವುದು ಬಹಳ ಕಷ್ಟದ ಕೆಲಸ.ಆದರೆ ಉತ್ತಮ ಶಿಕ್ಷಕ ಅದನ್ನು ಮಾಡಿಯೇ ಮಾಡುತ್ತಾನೆ,ಇನ್ನೊಬ್ಬರ ಜೇಬಿನ ಹಣ ತನ್ನ ಜೇಬಿಗೆ ಬರುವಂತೆ ಮಾಡುವುದೂ ಕೂಡ ಅಷ್ಟೇ ಕಷ್ಟದ ಕೆಲಸ. ಆದರೆ ಒಬ್ಬ ಸಫಲ ವ್ಯಾಪಾರಿ ಅದನ್ನು ಮಾಡುತ್ತಾನೆ ಖಂಡಿತ.ಆದರೆ ಒಬ್ಬ ಪತ್ನಿ ಈ ಎರಡನ್ನು ಸುಲಭವಾಗಿ ಮಾಡುತ್ತಾಳೆ ನೆನಪಿರಲಿ. (ಚಿತ್ರ: ಸಾಂದರ್ಬಿಕ, ಅಂತರ್ಜಾಲ ಕೃಪೆ)

LEAVE A REPLY

Please enter your comment!
Please enter your name here