ಛಾಯಾಗ್ರಹಣ ಒಂದು ಮಾಯಲೋಕ

0
1457

ಭಾಗ.4
ಕ್ಯಮಾರಾ ಮಹತ್ವದ ಭಾಗಗಳು
(Important parts of camera)
ಮನುಷ್ಯನ ಕಣ್ಣಿನ ರಚನೆಯನ್ನು ಕೆಮರಕ್ಕೆ ಹೋಲಿಸಬಹುದಾಗಿದೆ.ಅದ್ದರಿಂದ ಕಣ್ಣಿನ ಕಾರ್ಯ ವಿಧಾನದಂತೆ ಕ್ಯಮಾರಾದ ಕಾರ್ಯವಿಧಾನವನ್ನು ವಿವರಿಸಬಹುದು. ಸಕಲ ಜೀವರಾಶಿಗಳ ಕಣ್ಣುಗಳು ಒಂದು ಕೆಮರವೇ ಸತ್ಯ…
ಕೆಮರದಲ್ಲಿ ಮುಖ್ಯವಾದವುಗಳೆಂದರೆ…
1) ಕ್ಯಮಾರಾ ಪೆಟ್ಟಿಗೆ (light proof boxe)
2) ಮಸೂರ (lenses)
3) ಕವಾಟಗಳು (shutters)
4) ಬೆಳಕು ಒಳಬಿಡುವ ತೇಜೋರಂಧ್ರ ( aperture)
5) ಅವಲೋಕನ ಕಿಂಡಿ ( view finder)
6) ಶೋಧಕಗಳು ( filter’s)
7) ಒತ್ತುಗುಂಡಿ ( click batten/ trigger)
8) ಫಿಲ್ಮ್ ಸಾಗಿಸುವ ಸಾಧನ ( winder)
ಇವು ಎಲ್ಲವುಗಳ ಕಾರ್ಯ ಕ್ಷಮತೆಯನ್ನು ಅವಲೋಕಿಸೋಣ…
ಕ್ಯಮಾರಾ ಪೆಟ್ಟಿಗೆ… ಇದು ಕಪ್ಪು ಬಣ್ಣದಿಂದಲೇ ಮೆಟಲ್,ಫೈಬರ್ ಗಳಿಂದ ರಚನೆಗೊಂಡಿರುತ್ತದೆ.ಕಪ್ಪು ಬಣ್ಣವು ಒಳಗಿನ ಪ್ರಕಾಶವನ್ನು ಪ್ರತಿಫಲನಗೊಳ್ಳದಂತೆ ಮಾಡುತ್ತದೆ. ಈ ಕ್ಯಮಾರಾದ ಬೊಡಿ ಯಾವ ರೀತಿ ಮಾದರಿಯಲ್ಲಿ ಇದ್ದರೂ ಹೊರಗಿನ ಪ್ರಕಾಶ ಒಳಗೆ ಬಿಡದಂತಿರ ಬೇಕು.ಈ ಪೆಟ್ಟಿಗೆಯು ಬಿಸಿಲಿನಲ್ಲಿ ಬೇಗನೇ ಬಿಸಿಯಾಗಬಾರದು. ಇದನ್ನು ತಡೆಗಟ್ಟಲು ಕಪ್ಪು ಬಣ್ಣದ ಲೆದರ್ ಕವರನ್ನು ಕೆಮರ ಪೆಟ್ಟಿಗೆಗೆ ಅಳವಡಿಸುತ್ತಾರೆ.
ಕೆಮರ ಲೆನ್ಸ್….. ಈ ಮಸೂರ (ದುರ್ಬೀನ್) ಅಳತೆಯಲ್ಲಿ ಆಕಾರದಲ್ಲಿ ಮತ್ತು ರಚನೆಯಲ್ಲಿ ಬೇರೆ ಬೇರೆ ಆಗಿರುತ್ತದೆ.ಆದರೆ ಅದರ ತತ್ವ ಮಾತ್ರ ಒಂದೇ ಆಗಿರುತ್ತದೆ. ಒಂದು ವಸ್ತುವಿನ ಪ್ರಕಾಶ, ಕಿರಣವನ್ನು ಬಗ್ಗಿಸಿ ಶುಭ್ರವಾದ ಪ್ರತಿಬಿಂಬವು ಫಿಲ್ಮ್ ನಮೇಲೆ ಮೂಡುವಂತೆ ಮಾಡುತ್ತದೆ. ಶೆಟರ್ ತೆರೆದು ಲೆನ್ಸ್ ನ ರಂಧ್ರದ ಮೂಲಕ ಪ್ರಕಾಶ ಹಾಯಿಸಿದಾಗ ಸರಿಯಾದ ಪ್ರಕಾಶವು ಇದರ ಮೂಲಕ ( lanes) ಹಾಯ್ದು ಪ್ರತಿಬಿಂಬ (photo) ಫಿಲ್ಮ್ ನ ಮೇಲೆ ಮೂಡುವುದು ಉತ್ತಮ ದರ್ಜೆಯ ಲೆನ್ಸ್ ಉತ್ತಮ ಚಿತ್ರವನ್ನು (risult) ನೀಡುತ್ತದೆ. ಈ ಲೆನ್ಸ್ ನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವು ವಕ್ರೀಭವನಗೊಂಡು ಮುಖ್ಯ ಅಕ್ಷದ ಒಂದು ನಿರ್ಧಿಷ್ಟ ಬಿಂದುವಿನಲ್ಲಿ ಕೇಂದ್ರೀಕರಿಸಲ್ಪಟ್ಟು ಆ ಬಿಂದುವನ್ನು ಚಿತ್ರದ ಕೇಂದ್ರವೆಂದು ಕರೆಯಬಹುದಾಗಿದೆ. lense ನ ಈ ಕೇಂದ್ರವನ್ನು ಸಂಗಮ ದೂರ(focal length) ಎಂದು ಕರೆಯುತ್ತಾರೆ.ಈ ಪೋಕಲ್ ಲೆಂಗ್ತ್ ಪೋಟೊ ಗ್ರಾಫಿಯಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ.
ಕೆಮರದಲ್ಲಿ ಬೇರೆಬೇರೆ ರೀತಿಯ ಲೆನ್ಸ್ ಗಳನ್ನು ಬಳಸಿ ಪೋಟೊ ಶೂಟಿಂಗ್ ಮಾಡುತ್ತಾರೆ. ಇವುಗಳಲ್ಲಿ ಈ ಕೆಳಗಿನಂತೆ ಹಲವು ವಿಧವಿದೆ.
1) ನಾರ್ಮಲ್ ಲೆನ್ಸ್ ( 50 mm).
2)ಜೂಮ್ ಲೆನ್ಸ್ (35/70 mm).
3) ಟೆಲಿ ಲೆನ್ಸ್ (70/200-300… mm).
4) ವೈಡ್ ಆ್ಯಂಗಲ್ ಲೆನ್ಸ್ ( 28/8 mm).
5) ಫಿಷ್ ಐ ಲೆನ್ಸ್ ( 8 mm ಕ್ಕಿಂತ ಕಡಿಮೆ).
6) ಮ್ಯಾಕ್ರೊ ಲೆನ್ಸ್ .


  ನಾರ್ಮಲ್ ಲೆನ್ಸ್

ನಮ್ಮ ನೋಟಕ್ಕೆ ಸರಿಹೊಂದುವ ದೃಶ್ಯಗಳನ್ನು ಹಿಡಿಯುವ ಮಸೂರಗಳಿಗೆ ನಾರ್ಮಲ್ ಲೆನ್ಸ್ ಗಳೆನ್ನುತ್ತಾರೆ.ಈ normal lens ಕೆಮರ ಕಣ್ಣುಗಳಿಗಿಂತ 40′ ಡಿಗ್ರಿ hangul ನಲ್ಲಿ ಕಾಣುವಂತಹ ಚಿತ್ರವನ್ನು ಗ್ರಹಿಸುತ್ತದೆ. ಇದರ ಪೋಕಲ್ ಲೆಂಗ್ತ್ 50mm ಆಗಿರುತ್ತದೆ.
ಜುಮ್ ಲೆನ್ಸ್
ಮಸೂರಗಳಲ್ಲಿ ಫೋಕಲ್ ಲೆಂಗ್ತ್ ನ್ನ ಎರಿಸಲು ಮತ್ತು ಇಳಿಸಲು ಅನುಕೂಲತೆಗಳಿರುವ ಲೆನ್ಸ್ ನ್ನ ಜೂಮ್ ಲೆನ್ಸ್ ಎಂದು ಕರೆಯುತ್ತಾರೆ.ಇದು 35 mm ನಿಂದ 70 mm ವರೆಗೆ ವ್ಯವಸ್ಥೆ ಇರುವುದು.ಮದುವೆ, ಕ್ರೀಡೆ ಗಳಲ್ಲಿ ಇದನ್ನು ಬಳಸುವದು ಸಮಾನ್ಯ.
ಟೆಲಿಲೆನ್ಸ್
ಇದು ದೂರ ದರ್ಶಕ ಮಸೂರ. ಹೆಚ್ಚಿನ ಫೋಕಲ್ ಲೆಂಗ್ತ್ ಇರುವ ಟೆಲಿ ಫೋಟೊ ಲೆನ್ಸ್ ಗಳನ್ನು ದೂರದ ವಸ್ತುವಿನ ಛಾಯಗ್ರಹಣ ಮಾಡಲು ಬಳಸುವರು. ಇದು ಉದ್ದವಾಗಿಯೂ ಹಾಗೆ ಭಾರವಾಗಿಯೂ ತಯಾರಿಸಲ್ಪಟ್ಟು ಮಿನುಗುವ ನಕ್ಷತ್ರ,ದೂರದ ಬೆಟ್ಟ, ಸೂರ್ಯನ ಜ್ವಾಲೆ ಹೀಗೆ ಆನೇಕ ದೂರದ ದೃಶ್ಯಗಳನ್ನು ಹತ್ತಿರ ತಂದು ಸೆರೆಹಿಡಿಯಲು ಉಪಯೋಗವಾಗುವದು.
ವೈಡ್ ಆ್ಯಂಗಲ್ ಲೆನ್ಸ್
ಇದು ವಿಸ್ತಾರ ಕೋನ ಮಸೂರ. ತುಂಬಾ ಸನಿಹದ ದೃಶ್ಯ ಗಳನ್ನು ಬಹಳಷ್ಟು ಪರಿಣಾಮಕಾರಿಯಾಗಿ ಪಡೆಯಲು ಉಪಯೋಗಿಸುವರು. ಇದರ ಫೋಕಲ್ ಲೆಂಗ್ತ್ ಕಡಿಮೆ ಆಗಿದ್ದು ದೃಶ್ಯ ದ ಹೆಚ್ಚಿನ ಭಾಗ ಚಿತ್ರಗಳಲ್ಲಿ ಮೂಡುವುದು. ಸಮಾನ್ಯ 15 mm ನಷ್ಟು ಕಡಿಮೆ ಫೋಕಲ್ ಲೆಂಗ್ತ್ ಇರುವ ಈ ಮಸೂರಗಳು 110 ಡಿಗ್ರಿಯಷ್ಟು ದೃಶ್ಯಭಾಗಗಳನ್ನು ಮೂಡಿಸುತ್ತದೆ.
ಫಿಶ್ ಐ ಲೆನ್ಸ್
ಇದನ್ನು ಮತ್ಸ್ಯಾಕ್ಷಿ ಮಸೂರಗಳೆಂದು ಕರೆಯುವರು.180 ಡಿಗ್ರಿಯಷ್ಟು ಸಮಗ್ರ ಮತ್ತು ಅಷ್ಟೇ ವಿಸ್ತಾರವಾದ ಸಂಪೂರ್ಣ ದೃಶ್ಯ ಚಿತ್ರೀಕರಣ ಮಾಡುವ ಸಾದ್ಯತೆ ಹೊಂದಿದ ಲೆನ್ಸ್. ಅದರೆ ಪ್ರತಿಬಿಂಬ ಅಕ್ಷದಿಂದ ಅತ್ತಿತ್ತ ಸರಿಯುತಿದ್ದಂತೆ ಮೂಡಿಬಂದ ಚಿತ್ರದಲ್ಲಿ ಅಸಮತೆಯು ಕಂಡು ಬಾರದಂತೆ ಜಾಗ್ರತೆ ವಹಿಸಿ ಕೊಳ್ಳಬೇಕು.
ಮ್ಯಾಕ್ರೊ ಲೆನ್ಸ್
ಕ್ರಿಮಿ ಕೀಟ,ಹೂ,ಚಿಟ್ಟೆ, ಹೀಗೆ ಸಣ್ಣ ವಸ್ತುಗಳನ್ನು ದೊಡ್ಡದಾಗಿಸಿ ಸರಿಯಾಗಿ ಚಿತ್ರಕರಿಸಲು ಸಹಕಾರಿ ಯಾಗಬಲ್ಲದು. “ವ್ಯೂ” ಕೆನರಾಗಳಲ್ಲಿ ಇಂತಹ ಲೆನ್ಸ್ ಗಳನ್ನು ಅಳವಡಿಸಿ ಬೇಕಾದ ಹಾಗೆ ಸರಿಸಿಕೊಂಡು ವಸ್ತುಗಳ ಗಾತ್ರದಷ್ಟೇ ಗಾತ್ರದ ಚಿತ್ರ ಪಡೆಯಲು ಇದರಿಂದ ಸಾದ್ಯವಾಗವದು.

ಎಂ.ದೇವಾನಂದ ಭಟ್ ಬೆಳುವಾಯಿ.

LEAVE A REPLY

Please enter your comment!
Please enter your name here