`ಚೈಲ್ಡ್ ಹೆಲ್ಪ್ ಲೈನ್' ತಿಳುವಳಿಕಾ ಶಿಬಿರ

0
249

 
ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುವುದನ್ನು ನಿಲ್ಲಿಸಬೇಕು, ಎಲ್ಲಿಯಾದರೂ ಮಕ್ಕಳು ಕಾರ್ಮಿಕರಾಗಿ ಕೆಲಸಮಾಡುವುದನ್ನು ಕಂಡಲ್ಲಿ 1098 (ಚೈಲ್ಡ್ ಲೈನ್) ಎಂಬ ಉಚಿತ ನಂಬರಿಗೆ ಕರೆ ಮಾಡಿ ವಿವರಗಳನ್ನು ತಿಳಿಸುವಂತಹ ಕೆಲಸವನ್ನು ಮಾಡಬೇಕು ಎಂದು ಕಾಸರಗೋಡು ಚೈಲ್ಡ್ ಲೈನ್ ತಂಡದ ಪದ್ಮನಾಭನ್ ನುಡಿದರು.
 
badiyadka_child shibira
 
ಅವರು ಬುಧವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ ಚೈಲ್ಡ್ ಪ್ರೊಟೆಕ್ಶನ್ ತಿಳುವಳಿಕಾ ಶಿಬಿರವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ ಇಂದಿನ ಕಾಲದಲ್ಲಿ ಮಕ್ಕಳು ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದರಿಂದಾಗಿ ವಿದ್ಯಾಭ್ಯಾಸ ವಂಚಿತರಾಗುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ನಮ್ಮನ್ನು ಸಂಪರ್ಕಿಸಿ ಎಂದು ಮಕ್ಕಳಲ್ಲಿ ಕಿವಿ ಮಾತು ಹೇಳಿದರು. ಯಾವುದೇ ಕಾರಣಕ್ಕೂ ಭಿಕ್ಷಾಟನೆ ಮಾಡುತ್ತಿರುವ ಮಕ್ಕಳಿಗೆ ದುಡ್ಡನ್ನು ಕೊಡಬೇಡಿ. ಹಾಗೆ ಕಂಡುಬಂದಲ್ಲಿ ಉಚಿತ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದನ್ನು ಮರೆಯಬೇಡಿ ಎಂದರು.
 
 
ಗ್ರಾಮೋತ್ಥಾನ ಸೇವಾ ಸಮಿತಿ ಬದಿಯಡ್ಕ, ಚೈಲ್ಡ್ ಹೆಲ್ಪ್ ಲೈನ್ ಕಾಸರಗೋಡು ಹಾಗೂ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಗ್ರಾಮೋತ್ಥಾನ ಸೇವಾ ಸಮಿತಿಯ ಪ್ರೋಜೆಕ್ಟ್ ಕೋ ಓರ್ಡಿನೇಟರ್ ಧನಂಜಯನ್ ಮಧೂರು ಮಾತನಾಡಿದರು.

LEAVE A REPLY

Please enter your comment!
Please enter your name here