ಚೈಲ್ಡ್ ಲೈನ್ ಮಂಗಳೂರು-1098 'ತೆರೆದ ಮನೆ' ಮಾಹಿತಿ ಕಾರ್ಯಕ್ರಮ

0
349

 
ಮಂಗಳೂರು ಪ್ರತಿನಿಧಿ ವರದಿ
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್ ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಜ. 12ರಂದು ಕಾವೂರು ವಿಧ್ಯಾನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
 
 
ಈ ಕಾರ್ಯಕ್ರಮವನ್ನು ಸ್ಥಳಿಯ ವಾರ್ಡ್ ಸದಸ್ಯರಾದ ದಯಾನಂದ್ ಶೆಟ್ಟಿ, ಅತಿಥಿಗಳು ಮತ್ತು ಮಕ್ಕಳಿಂದ ಚೈಲ್ಡ್ ಲೈನ್-1098 ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು.
 
 
ಚೈಲ್ಡ್ ಲೈನ್ ಮಂಗಳೂರು-1098 ನಗರ ಸಂಯೋಜಕರಾದ ಯೋಗಿಶ್ ಮಲ್ಲಿಗೆ ಮಾಡುರವರು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ‘ತೆರೆದ ಮನೆ’ ಕಾರ್ಯಕ್ರಮವನ್ನು ಬೇರೆ ಬೇರೆ ವಾರ್ಡಗಳಲ್ಲಿ ಆಯೋಜಿಸಿ ಮಕ್ಕಳು ಹಾಗೂ ಅವರ ಪಾಲಕರಿಗೆ ಮಕ್ಕಳ ಮೇಲಾಗುವ ದೌರ್ಜನ್ಯದ ಬಗ್ಗೆ ಹಾಗೂ ಅದರ ನಿವಾರಣಾ ಕ್ರಮಗಳ ಕುರಿತು ವಿವರಿಸಿ, ಮಕ್ಕಳು ಸಮಸ್ಯೆ ಒಳಗಾದರೆ ಮಾತ್ರವಲ್ಲದೆ, ಸಮಸ್ಯೆ ಕಂಡು ಬಂದರೂ ಸಹ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಚೈಲ್ಡ್ ಲೈನ್-1098ಗೆ ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು. ಚೈಲ್ಡ್ ಲೈನ್-1098 ದಿನದ 24 ಗಂಟೆಯೂ ಕಾರ್ಯನಿರತವಾಗಿದ್ದು, ಯಾವೂದೇ ಸಮಯದಲ್ಲು ಸಹಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
 
 
 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾವೂರು ಪೋಲಿಸ್ ಠಾಣೆಯ ಸಿಬ್ಬಂದಿಯಾದಂತಹ ಕು.ಶಿಲ್ಪಾರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸುತ್ತಮುತ್ತಲಿನ ಸ್ಥಳಗಳಲ್ಲಿ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ಮನೆಯಲ್ಲಿ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಮುಂಜಾಗ್ರತೆ ಕ್ರಮ ವಹಿಸಬೇಕು,ಮಕ್ಕಳಿಗೆ ಮನೆಯಲ್ಲೆ ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಮಾಹಿತಿ ನೀಡುವುದರೊಂದಿಗೆ ತಮ್ಮ ಸ್ವ-ರಕ್ಷಣೆಯನ್ನು ಮಾಡಿಕೊಳ್ಳಲು ಕಲಿಸಿಕೊಡಬೇಕು ಎಂದು ಹೇಳುತ್ತ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ-2012ರಲ್ಲಿ ಪ್ರಮುಖ ಅಂಶಗಳ ಕುರಿತು ವಿವರಿಸುವುದರೊಂದಿಗೆ ಪರಿಸರದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲೆ ಯಾವೂದೇ ರೀತಿಯಲ್ಲಿ ಅಹಿತಕರ ಘಟನೆಗಳು, ಸಮಸ್ಯೆಗಳು ಆದಲ್ಲಿ ಯಾವುದೇ ಹೆದರಿಕೆ, ಸಂಕೋಚ ಇಲ್ಲದೆ ನೇರವಾಗಿ ತಮ್ಮ ವ್ಯಾಪ್ತಿಯ ಪೋಲಿಸ್ ಠಾಣೆಯನ್ನು ನೇರವಾಗಿ ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದು ತಿಳಿಸಿದರು.
 
 
 
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳಿಯ ವಾರ್ಡ್ ಸದಸ್ಯರಾದ ದಯಾನಂದ್ ಶೆಟ್ಟಿಯವರು ಮಾತನಾಡುತ್ತಾ ನಮ್ಮನ್ನು ಕಾಪಾಡುವವರೇ ದೌರ್ಜನ್ಯ ಎಸಗಿದರೆ ಅದು ಶೋಚನೀಯ. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಇಂತಹ ಘಟನೆಗಳೆ ಹೆಚ್ಚಾಗಿ ಕಾಣಸಿಗುತ್ತಿವೆ. ನಾಗರಿಕರು ತಮ್ಮ ಮೇಲೆ ಯಾವೂದೇ ರೀತಿಯಲ್ಲಿ ಅನ್ಯಾಯ/ದೌರ್ಜನ್ಯಗಳು ಸಂಭವಿಸಿದರೆ ಅವರುಗಳೆ ಮೊದಲು ಧ್ವನಿ ಎತ್ತಿ ಅದರ ವಿರುದ್ಧ ಹೊರಾಡಬೇಕು. ಮಕ್ಕಳ ಮತ್ತು ಮಹಿಳೆಯರಿಗೆ ಸಮಸ್ಯೆ ಬಂದಲ್ಲಿ ಚೈಲ್ಡ್ ಲೈನ್-1098ರ ಹಾಗೆ ಇರುವ ಸರಕಾರದ ಇತರ ಇಲಾಖೆಗಳ ಸಹಕಾರ ಪಡೆದುಕೊಂಡು ಅನ್ಯಾದ ವಿರುದ್ಧ ಹೊರಾಡಬೇಕು ಎಂದು ತಿಳಿಸುತ್ತ ತನ್ನ ವಾರ್ಡ್ ಮಟ್ಟದಲ್ಲಿ ಮಕ್ಕಳಿಗೆ ಸಂಬಂಧಿಸಿದ ಹಾಗೂ ಸ್ಥಳಿಯವಾಗಿ ಯಾವೂದೇ ಸಮಸ್ಯೆ ಇದ್ದಲ್ಲಿ ತನ್ನ ಗಮನಕ್ಕು ತರಬಹುದು ಎಂದು ತಿಳಿಸುತ್ತ ಚೈಲ್ಡ್ ಲೈನ್ ಮಂಗಳೂರು-1098 ಸೇವೆಯನ್ನು ಶ್ಲಾಘಿಸಿದರು.
 
 
ಕಾರ್ಯಕ್ರಮದ ಇನ್ನೊಂದು ಅತಿಥಿಯಾದ ಶಿಕ್ಷಣ ಇಲಾಖೆಯ ಸಂಯೋಜಕರಾದ ಶೀಲಾವತಿಯವರು ಶಿಕ್ಷಣದ ಮಹತ್ವವನ್ನು ವಿವರಿಸುತ್ತಾ ಉತ್ತಮ ನಾಗರಿಕರಾಗಲು ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ. ಶಿಕ್ಷಣದಿಂದ ತಮ್ಮ ತಮ್ಮ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ದ ಹೋರಾಡುವುದರೊಂದಿಗೆ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬಹುದು ಎಂದು ತಿಳಿಸುತ್ತ ಹಾಗಾಗಿ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
 
 
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ವಿಜಯಲಕ್ಷ್ಮಿ, ಸ್ಥಳಿಯ ನಾಗರಿಕರು, ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಚೈಲ್ಡ್ ಲೈನ್ ಮಂಗಳೂರು-1098ರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಆಶಾಲತಾ ಕುಂಪಳ ನಿರೂಪಿಸಿದರು. ಶಾಲೆಯ ಸಹಶಿಕ್ಷಕರಾದ ವಾಣಿಯವರು ಸ್ವಾಗತಿಸಿದರು. ಜಯಂತಿ ಕೊಕಳ ವಂದಿಸಿದರು.

LEAVE A REPLY

Please enter your comment!
Please enter your name here