ಚೇಂಜ್ ದಿ ಸ್ಕ್ರಿಪ್ಟ್ 2017 ಸಮ್ಮೇಳನ ಬೆಂಗಳೂರಲ್ಲಿ ಉದ್ಘಾಟನೆ

0
428

ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ಒಬಾಮಾ ಮಾಜಿ ಕಾರ್ಯದರ್ಶಿ ಬೆಂಗಳೂರಿಗೆ ಆಗಮನ
ಶಿಕ್ಷಕರು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಶಿಕ್ಷಣ ಸಂಸ್ಥೆಗಳು ಒಂದಾಗಿ ಭಾರತೀಯಯುವ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಒಂದೇ ವೇದಿಕೆ ಮೂಲಕ ವಿಶಿಷ್ಟ ಚಳವಳಿ ರೂಪಿಸುವ ಯತ್ನ.
21ನೇ ಶತಮಾನದ ಸವಾಲುಗಳನ್ನು ಎದುರಿಸಲುಯುವ ಸಮುದಾಯಕ್ಕೆ ಅಗತ್ಯ ವೇದಿಕೆ ಕಲ್ಪಿಸುವುದು ಗುರಿ.
 
 
ಚೇಂಜ್ ದಿ ಸ್ಕ್ರಿಪ್ಟ್, 2017 (ಸಿಟಿಎಸ್2017), ವಾರ್ಷಿಕ ಸಮ್ಮೇಳನವು ಶಿಕ್ಷಕರು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಒಂದು ವೇದಿಕೆಯಡಿ ಕರೆ ತಂದಿದ್ದು, ಎರಡು ದಿನದ ಸಮ್ಮೇಳನ ಮೂಲಕ ಶಿಕ್ಷಣ ಕ್ಷೇತ್ರದ ಹಾಗೂ ಜೀವನ ಕೌಶಲ್ಯ ಕುರಿತು ಮಹತ್ವದ ಕುರಿತು ಚರ್ಚಿಸಿದ್ದಾರೆ. ಬೆಂಗಳೂರಿನಲ್ಲಿ ಜನವರಿ 20 ಮತ್ತು 21ರಂದು ಸಿಟಿಎಸ್ 2017ನ್ನು ಹಮ್ಮಿಕೊಳ್ಳಲಾಗಿತ್ತು. 21ನೇ ಶತಮಾನದಲ್ಲಿ ಎದುರಾಗಿರುವ ಸವಾಲುಗಳನ್ನು ಯುವ ಸಮುದಾಯ ಸಮರ್ಥವಾಗಿ ಎದುರಿಸಲು ಅನುಕೂಲವಾಗುವ ಹಾಗೂ ಪ್ರಭಲ ತಳಪಾಯವನ್ನು ಕಲ್ಪಿಸುವ ಮೂಲಕ ಸಹಕರಿಸುವುದು ಸಮ್ಮೇಳನದ ಮುಖ್ಯಉದ್ದೇಶ.
 
ಚೇಂಜ್ ದಿ ಸ್ಕ್ರಿಪ್ಟ್ ಈಗೇಕೆ? ಹಿಂದೆಂದಿಗಿಂತ ವೇಗವಾಗಿ ಪ್ರಪಂಚ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬಹುದಾದ ಏಕೈಕ ವಿಷಯವೆಂದರೆ 21ನೇ ಶತಮಾನದಯುವಕರ ಅಗತ್ಯಗಳು ಏನೇನು?ಎನ್ನುವುದು. ನಮ್ಮ ಸಮಾಜದ ಅಗತ್ಯಗಳು ಕೂಡ ಬದಲಾಗಿದೆ. ಹಾಗೂ ಯುವ ಸಮುದಾಯಕ್ಕೆ ಇಂದಿನ ಸಂಕೀರ್ಣ ಹಾಗೂ ಅನಿರೀಕ್ಷಿತ ಜಾಗತಿಕ ವಿದ್ಯಮಾನದಲ್ಲಿ ಹೊಸ ಕೌಶಲ್ಯದ ಅಗತ್ಯವಾಗಿದೆ.
 
 
ವಿವಿಧ ಸಮೂಹಗಳು ಹಾಗೂ ವೈಯಕ್ತಿಕ ಸಂಸ್ಥೆಗಳು ತಮ್ಮದೇ ಆದ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಅಗತ್ಯವಿರುವುದನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿವೆ. ಕ್ಲಿಷ್ಟಕರ ಕೌಶಲ್ಯ ಹಾಗೂ ಪೋಷಣೆಯ ಪರಿಸರ ನಿರ್ಮಿಸುವ ಕಾರ್ಯವನ್ನು ತಮ್ಮ ಮೂಲಕ ಮಾಡುತ್ತಿವೆ. ಆದರೆ ಜೀವನ ಕೌಶಲ್ಯದಲ್ಲಿ ಕ್ಲಿಷ್ಟಕರ ಕೌಶಲ್ಯವನ್ನು ಒದಗಿಸುವ ಹಾಗೂ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸಹಾಯಕ ಸಮುದಾಯ ಸೃಷ್ಟಿಸುವ ಅಗತ್ಯ ಇದ್ದು ಇದನ್ನು ಸಕಾರಾತ್ಮಕ ಮನೋಭಾವ ಹೊಂದಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಮಾಡಬೇಕಿದೆ. ಈ ಮೂಲಕ ಯುವ ಸಮುದಾಯದ ಉದ್ದೇಶ ಮತ್ತು ಕ್ರಮಗಳನ್ನು ಕಾಪಾಡಬೇಕಿದೆ.
ಸಿಟಿಎಸ್ 2017 ನಲ್ಲಿ ಸಂಬಂಧಿಸಿದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಜನಪ್ರಿಯ ಹಾಗೂ ಗೌರವಾನ್ವಿತ ವ್ಯಕ್ತಿಗಳು ಪಾಲ್ಗೊಂಡಿದ್ದರು.
 
 
ಬರಾಕ್ಒಬಾಮಾ ಅವರ ಮಾಜಿ ಉಪ ಸಹಾಯಕ ಮಾನ್ಯ ಹೆನ್ರಿಎಫ್.ಡೆ ಸಿಯೊ ಜೆಆರ್, ಇವರು 2008ರಲ್ಲಿ ಅಮೆರಿಕದಲ್ಲಿ ಒಬಾಮಾಗೆ ಮುಖ್ಯಆಚರಣೆ ಅಧಿಕಾರಿ (ಸಿಒಒ) ಆಗಿ ಕಾರ್ಯನಿರ್ವಹಿಸಿದ್ದರು. ಇವರು ಕೂಡ ಉಪಸ್ಥಿತತರಿದ್ದ ಸಮ್ಮೇಳನದ ಘನತೆ ಹೆಚ್ಚಿಸಿದರು. ಅಶೋಕನ ಚೌಕಟ್ಟನ್ನು ಬದಲಿಸುವ ಪ್ರಯತ್ನ ಮಾಡುತ್ತಿರುವ ಎವ್ರಿಒನ್ ಎ ಚೇಂಜ್ಮೇಕರ್ ಸಂಸ್ಥೆ, ಮಾನಸಿಕ ರೋಗತಜ್ಞರಾದಡಾ.ಡೆವಿಡ್ ಪರ್ಸನ್, ಡಾ. ಫಿಯೇನಾಕೆನಡಿ, ಯುವ ಸಮುದಾಯವನ್ನು ಮುನ್ನಡೆಸುವ ಎನ್ಜಿಒ ಮಂಜಿಲ್ನ ಸಹ ಸ್ಥಾಪಕ ರವಿ ಗುಲಾಟಿ, ಕೈವಲ್ಯ ಎಜ್ಯುಕೇಷನ್ ಫೌಂಡೇಶನ್ನ ಸಂಶೋಧನೆ, ಪಠ್ಯಕ್ರಮ ವಿನ್ಯಾಸ ಹಾಗೂ ಮೌಲ್ಯಮಾಪನ ವಿಭಾಗದ ನಿರ್ದೇಶಕರಾದ ಮೋನಾಲ್ಜಯರಾಂ, ಅಪ್ನಿ ಸಲಹಾದ ಸಿಇಒ ಹಾಗೂ ಸಹ ಸಂಸ್ಥಾಪಕಿ ಅಮೃತಾ ನಾಯರ್ ಇವರು ಮಾತ್ರವಲ್ಲ ಇನ್ನೂ ಹಲವು ಮಂದಿ ಶಿಕ್ಷಣ ಕ್ಷೇತ್ರದ ಪರಿವರ್ತಕರು ಆಗಮಿಸಿದ್ದರು. ವಿವಿಧ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಎನ್ ಜಿ ಒಗಳು ಪಾಲ್ಗೊಂಡಿದ್ದರು.
 
 
ಸಮ್ಮೇಳನದ ಮಹತ್ವಕುರಿತು ಮಾತನಾಡಿದ ಡ್ರೀಮ್ ಎ ಡ್ರೀಮ್ ಸಂಸ್ಥೆಯ ಸಿಇಒ ಹಾಗೂ ಸಹ ಸಂಸ್ಥಾಪಕ ವಿಶಾಲ್ತಲ್ರೇಜಾ, ಇಂದಿನ ಯುವ ಸಮುದಾಯತಮ್ಮನ್ನು ಅರ್ಥಮಾಡಿಕೊಳ್ಳಲು, ತಮ್ಮನ್ನು ಕೇಳಲು, ತಮ್ಮ ಸಂಕೀರ್ಣತೆಯಿಂದ ತಮಗೆ ಸಹಾಯ ಮಾಡಲು ಸೂಕ್ತ ಸಹಕಾರ ವ್ಯವಸ್ಥೆಯನ್ನು ಅಪೇಕ್ಷಿಸುತ್ತಿದೆ. ತಮ್ಮ ಬದುಕಿನ ರೂಪವನ್ನು ಬದಲಿಸಿಕೊಳ್ಳಲು ಎದುರಾಗುವ ಪ್ರತಿಕೂಲ ವಾತಾವರಣವನ್ನು ಸರಿಪಡಿಸಿಕೊಳ್ಳಲು ಅವರು ಜೀವನ ಕೌಶಲ್ಯವನ್ನು ಬಯಸುತ್ತಿದ್ದಾರೆ. ಪ್ರತಿಯೊಬ್ಬ ಭಾಗೀದಾರರೂ ತಮ್ಮ ಕೆಲಸದ ಮೂಲಕ ಯುವ ಸಮುದಾಯದ ಕ್ಲಿಷ್ಟಕರ ಕೌಶಲ್ಯ ಹಾಗೂ ಈ ಮೂಲಕ ಅವರ ಪ್ರಗತಿಗೆ ಅನುಕೂಲ ಕಲ್ಪಿಸಿಕೊಡುವ ಯತ್ನ ಮಾಡುತ್ತಿದ್ದಾರೆ. ಒಟ್ಟಾಗಿ ಯತ್ನಿಸುವ ಮೂಲಕ ನಾವು ಹೆಚ್ಚು ಸಮಗ್ರ, ಸಂಘಟಿತ ಹಾಗೂ ಸ್ಫೋಟಕ ರೂಪದಲ್ಲಿ ಚಿತ್ರಣವನ್ನೇ ಬದಲಿಸುವ ಪರಿಹಾರವನ್ನು ಯುವ ಸಮುದಾಯಕ್ಕೆ ನೀಡಲಿದ್ದೇವೆ. ನಾವೆಲ್ಲಾ ಒಟ್ಟಾಗಿ ಸಾಗುವುದರಿಂದ ಒಂದು ಸಕಾರಾತ್ಮಕ ಸಹಾಯಕ ಸಮುದಾಯವನ್ನು ಕಟ್ಟಬಹುದುಎಂಬುದನ್ನು ನಂಬಿದ್ದೇವೆ’ ಎಂದರು.
 
 
ಖ್ಯಾತ ಮನೋವೈದ್ಯಡಾ.ಫಿಯೋನಾ ಮಾತನಾಡಿ, ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನದ ಕ್ರಾಂತಿ ಉಂಟಾಗುತ್ತಿದೆ. ಜಗತ್ತು ಸದಾ ಬೇಡಿಕೆಯ ಕೆಲಸಕ್ಕೆ ಒತ್ತುಕೊಡುತ್ತಿದೆ. 21ನೇ ಶತಮಾನದ ಮೂಲಕ ಬದಲಾವಣೆಯನ್ನು ಯುವ ಸಮುದಾಯಕ್ಕೆ ಪ್ರಸ್ತುತಪಡಿಸಬೇಕಿದೆ. ವಿಫಲವಾದ ಮಕ್ಕಳು ಕೂಡ ಇಂದು ಅವಕಾಶ ಪಡೆಯುವ ವಾತಾವರಣ ಇದೆ. ಇದರಿಂದ ಇವರನ್ನು ಮತ್ತೆ ಪ್ರವರ್ಧಮಾನಕ್ಕೆ ತರಲು ಉತ್ತೇಜಿಸಬೇಕಿದೆ. ಸೋಲುಗಳು ಹಾಗೂ ಸವಾಲುಗಳನ್ನು ಎದುರಿಸುವ ಮೂಲಕ ಕ್ಲಿಷ್ಟಕರ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸಬೇಕಿದೆ. ಇಂದು ನಾವು ಯುವ ಸಮುದಾಯದಿಂದ ನಮ್ಮ ನಿರೀಕ್ಷೆಗಳು ಏನೇನು ಎನ್ನುವುದನ್ನು ಮರುಪರಿಶೀಲಿಸಬೇಕಿದೆ. ಒಟ್ಟಾರೆ ಅವರ ಎದುರು ಇರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಜೀವನದಲ್ಲಿ ಯಶಸ್ಸು ಗಳಿಸುವಂತೆ ಮಾಡಬೇಕಿದೆ. ನಾನು ಹಾಗೂ ಡಾ.ಡೆವಿಡ್ ಈ ಸಮ್ಮೇಳನದ ಒಂದು ಭಾಗವಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದೇವೆ. ಕಲಿಕೆಯ ವಿಚಾರದಲ್ಲಿ ಆವಿಷ್ಕಾರಿ ತಲುಪುವಿಕೆಯನ್ನು ನಿರ್ಮಿಸುವ ಕಾರ್ಯದಲ್ಲಿ ನಮ್ಮ ಸಹಕಾರ ಇದ್ದೇ ಇದೆ ಎಂದರು.
 
 
 
ಡ್ರೀಮ್ ಎ ಡ್ರೀಮ್ ಕುರಿತು:
ಡ್ರೀಮ್ ಎ ಡ್ರೀಮ್ 1999ರಲ್ಲಿ ಆರಂಭವಾದ ಸಂಸ್ಥೆ. ಮಕ್ಕಳನ್ನು ಹಾಗೂ ಯುವ ಸಮುದಾಯದವರನ್ನು ಅಧಿಕಾರಕ್ಕೆ ತರುವ ಕಾರ್ಯದಲ್ಲಿ ನಿರತವಾಗಿರುವ ಚಾರಿಟೆಬಲ್ ಟ್ರಸ್ಟ್ ಆಗಿದೆ. ಮೌಲ್ಯಾತ್ಮಕ ಹಿನ್ನೆಲೆ ಹೊಂದಿರುವ 21ನೇ ಶತಮಾನದ ಪ್ರತಿಕೂಲಗಳನ್ನು ಪರಿಹರಿಸುವ ಹಾಗೂ ಏಳ್ಗೆಗೆ ಶ್ರಮಿಸುವ ಮೂಲಕ ಕ್ರಿಯಾತ್ಮಕ ಕೌಶಲ್ಯಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಸಂಸ್ಥೆ 10,000 ಯುವಕರ ಜತೆ ಕಾರ್ಯನಿರ್ವಹಿಸುತ್ತಿದೆ. 40 ಪಾಲುದಾರ ಎನ್ಜಿಒಗಳು, 2500 ತರಬೇತಿ ಹೊಂದಿದ ಶಿಕ್ಷಕರು, 60 ಮಂದಿ ಶಿಕ್ಷಣ ಕ್ಷೇತ್ರದತಜ್ಞರು, 62,500 ಮಕ್ಕಳು, 2500 ಸ್ವಯಂ ಸೇವಕರನ್ನು ಒಳಗೊಂಡು ಅಪರೂಪದ ಜೀವನಕೌಶಲ್ಯ ರೂಪಿಸುವ ಕಾರ್ಯದಲ್ಲಿ ನಿರತರವಾಗಿದೆ. ವೈವಿಧ್ಯಮಯ ಮಧ್ಯಸ್ಥಗಾರರನ್ನು ಒಳಗೊಂಡು ಬಲವಾದ ಸಹಯೋಗದ ವಿಧಾನ ಬಳಸಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಡ್ರೀಮ್ ಎ ಡ್ರೀಮ್ಜೀವನ ಕೌಶಲ್ಯಕ್ಷೇತ್ರದಲ್ಲಿಒಬ್ಬ ಪ್ರವರ್ತಕನಾಗಿ ಭಾರತದಲ್ಲಿ ಗುರುತಿಸಿಕೊಂಡಿದೆ. ಇತ್ತೀಚೆಗೆ ಲೆಗೊ ಫೌಂಡೇಷನ್ ಹಾಗೂ ಜಗತ್ತನ್ನು ವಿಭಿನ್ನ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಲು ಮರುಕಲ್ಪನೆ ರೂಪಿಸುವ ಈ ಕ್ಷೇತ್ರದ ಚಾಂಪಿಯನ್ ಆಗಿರುವ ಅಶೋಕ ಸಂಸ್ಥೆಯಿಂದ ಗುರುತಿಸಲ್ಪಟ್ಟಿದೆ.
ವರದಿ: ವಿವೇಕ್ ಕೊರ್ನೆಲಿಯೊ

LEAVE A REPLY

Please enter your comment!
Please enter your name here