ಚೆಕ್ ವಿತರಣೆ

0
421

ಮೂಡುಬಿದಿರೆ ಪ್ರತಿನಿಧಿ ವರದಿ
ಮೂಡಬಿದಿರೆ ವಿಶೇಷ ತಹಶೀಲ್ದಾರರ ಕಚೇರಿಯಲ್ಲಿ ಮಂಗಳವಾರ ನಡೆದ ಸಾಮಾಜಿಕ ಭದ್ರತೆ ಯೋಜನೆಯ ಸವಲತ್ತು ಹಾಗೂ 94 ಸಿ, 94 ಸಿಸಿ ಹಕ್ಕುವಿತರಣೆ ಸಮಾರಂಭ ಹಾಗೂ ಚೆಕ್ ವಿತರಣಾ ಸಮಾರಂಭದಲ್ಲಿ ಅರ್ಹ ಫಲಾನುಭವಿಗಳಿಗೆ ಶಾಸಕ ಅಭಯಚಂದ್ರ ಜೈನ್ ಚೆಕ್ ವಿತರಿಸಿದರು.
 
 
ಅಂತ್ಯಸಂಸ್ಕಾರ ಸಹಾಯಧನ ಯೋಜನೆಯಲ್ಲಿ 5ಸಾವಿರ ರುಪಾಯಿಯಂತೆ 242ಮಂದಿ ಫಲಾನುಭವಿಗಳಿಗೆ ರುಪಾಯಿ 12 ಲಕ್ಷ ಮೌಲ್ಯದ ಚೆಕ್ ವಿತರಿಸಲಾಯಿತು. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ತಲಾ 20 ಸಾವಿರದಂತೆ 12 ಮಂದಿ ಫಲಾನುಭವಿಗೆ ಚೆಕ್ ವಿತರಿಸಲಾಯಿತು. ಮೂಡಬಿದಿರೆ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ತಹಶೀಲ್ದಾರ್ ಮಹಮ್ಮದ್ ಇಸಾಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here