ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ಚಿತ್ರ ಪ್ರತಿಷ್ಠೆ

0
576

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ನವೀಕರಣ ಪ್ರತಿಷ್ಠಾ ಮಹೋತ್ಸವ ಸಮಾರಂಭವು ಸೋಮವಾರ ಬೆಳಗ್ಗೆ 8.15ರ ಧನುರ್ಲಗ್ನದಲ್ಲಿ ಶ್ರೀ ಸ್ವಾಮಿಯ ರಜತ ಚಿತ್ರದ ಪ್ರತಿಷ್ಠೆಯನ್ನು ನೆರವೇರಿಸಲಾಯಿತು.
 
 
 
ಮಂದಿರದ ಪ್ರಧಾನ ಕುಂಞಿಕಣ್ಣ ಗುರುಸ್ವಾಮಿಯವರು ಅಯ್ಯಪ್ಪ ಸ್ವಾಮಿಯ ರಜತ ಚಿತ್ರಕ್ಕೆ ಪೂಜಿಸಿ ಮಂದಿರಕ್ಕೆ ಪ್ರದಕ್ಷಿಣಿಗೈದು ಗರ್ಭಗುಡಿಯಲ್ಲಿ ಊರಪರವೂರ ಭಕ್ತರ, ಅಯ್ಯಪ್ಪ ಮಾಲಾಧಾರಿಗಳ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆಯೊಂದಿಗೆ ಪ್ರತಿಷ್ಠೆಗೈದರು.
 
 
 
ಶ್ರೀ ದೇವರಿಗೆ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಬೆಳಗ್ಗೆ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ 12 ನಾಳಿಕೇರ ಗಣಪತಿ ಹೋಮವನ್ನು ನೆರವೇರಿಸಲಾಯಿತು. ಶ್ರೀ ಲಕ್ಷೀ ವೆಂಕಟ್ರಮಣ ಭಜನ ಸಂಘ ಮಾನ್ಯ, ಶ್ರೀಮಾತಾ ಹವ್ಯಕ ಮಹಿಳಾ ಭಜನಾ ಸಂಘ ಬದಿಯಡ್ಕ, ಶ್ರೀ ಕುಮಾರ ಸ್ವಾಮಿ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ ನಡೆಯಿತು.

LEAVE A REPLY

Please enter your comment!
Please enter your name here