ಚೀನಾ ಜಿಡಿಪಿ ದಾಖಲೆ ಪ್ರಮಾಣದಲ್ಲಿ ಕುಸಿತ

0
520

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಚೀನಾ ಜಿಡಿಪಿ ಕಳೆದ 26 ವರ್ಷಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. 2016 ನೇ ಸಾಲಿನಲ್ಲಿ ಚೀನಾ ಜಿಡಿಪಿ 6.7 ರಷ್ಟಾಗಿದೆ.
 
 
ಜಿಡಿಪಿ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದರೂ ಸಹ ಸರ್ಕಾರದ ನಿರೀಕ್ಷಿತ ಗುರಿ ತಲುಪಿದೆ ಎಂದು ಅಲ್ಲಿನ ಅಧಿಕೃತ ಅಂಕಿ-ಅಂಶಗಳು ಹೇಳಿವೆ. ನಾಲ್ಕನೇ ತ್ರೈಮಾಸಿಕದಲ್ಲಿ ಕಳೆದ ತ್ರೈಮಾಸಿಕಕ್ಕಿಂತಲೂ ಹೆಚ್ಚಿನ ಬೆಳವಣಿಗೆಯಾಗಿದೆ ಎಂದು ರಾಷ್ಟ್ರೀಯ ಅಂಕಿ-ಅಂಶ ದಳ(ಎನ್ ಬಿಎಸ್) ಹೇಳಿದೆ.
 
 
2016 ನೇ ಆರ್ಥಿಕ ವರ್ಷಕ್ಕೆ ಚೀನಾ ಶೇ.6.7 ರಿಂದ ಶೇ.7 ರಷ್ಟು ಜಿಡಿಪಿ ಗುರಿ ಹೊಂದಿತ್ತು. 2016 ರಲ್ಲಿ ಜಿಡಿಪಿ 10 ಟ್ರಿಲಿಯನ್ ಡಾಲರ್ ಗಳಷ್ಟಾಗಿದ್ದು, ಸೇವಾ ಕ್ಷೇತ್ರದಿಂದ ಶೇ.51.6 ರಷ್ಟು ಕೊಡುಗೆ ನೀಡಿದ್ದರೆ 2015 ರಲ್ಲಿ ಶೇ.6.1 ರಷ್ಟಿದ್ದ ಕೈಗಾರಿಕಾ ಉತ್ಪಾದನೆ ಶೇ.6 ಕ್ಕೆ ಕುಸಿದಿದೆ. ಇನ್ನು ಚಿಲ್ಲರೆ ಮಾರಾಟ ಶೇ.10.4 ರಷ್ಟಾಗಿದೆ.

LEAVE A REPLY

Please enter your comment!
Please enter your name here