ಚೀನಾವನ್ನು ಸೋಲಿಸಿದ ಭಾರತದ ಹಾಕಿ

0
352

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಭಾರತೀಯ ಮಹಿಳಾ ಹಾಕಿ ತಂಡ ಚೀನಾ ತಂಡವನ್ನು ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
 
 
ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ದೀಪಿಕಾ ಠಾಕೂರ್ ಅಂತಿಮ ಕ್ಷಣದಲ್ಲಿ ಗೋಲು ಗಳಿಸುವ ಮೂಲಕ ತಂಡಕ್ಕೆ ಗೆಲುವು ಕೊಡಿಸಿದರು. 1-1 ರಿಂದ ಅಂಕ ಸಮವಾಗಿದ್ದಾಗ 60 ನೇ ನಿಮಿಷದಲ್ಲಿ ದೀಪಿಕಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು.
 
ದೀಪ್ ಗ್ರೇಸ್ ಎಕ್ಕಾ ಭಾರತದ ಪರ ಗೋಲು ಗಳಿಸಿದ ಇನ್ನೋರ್ವ ಆಟಗಾರ್ತಿ. ಚಾಂಪಿಯನ್ ಆದ ಮಹಿಳಾ ತಂಡಕ್ಕೆ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ. ಕಳೆದ ವಾರವಷ್ಟೇ ಪುರುಷರ ಹಾಕಿ ತಂಡ ಪಾಕಿಸ್ತಾನ ವಿರುದ್ಧ ಗೆದ್ದು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಇದೀಗ ಮಹಿಳೆಯರೂ ಅದೇ ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here