ಮೈಸೂರು ಪ್ರತಿನಿಧಿ ವರದಿ
ಕಪಿಲಾ ನದಿಯ ಹಿನ್ನೀರಿನಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಕಿತ್ತೂರಿನ ರಾಮೇಶ್ವರಸ್ವಾಮಿ ಕ್ಷೇತ್ರದ ಬಳಿ ನದಿಯಲ್ಲಿ ಶವ ಪತ್ತೆಯಾಗಿದೆ.
ಉರುಳು ಬಿಗಿದ ಸ್ಥಿತಿಯಲ್ಲಿ ಚಿರತೆಯ ಶವ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿ ಹಗ್ಗ ಕಂಡುಬಂದಿದೆ. ಉರುಳಿಗೆ ಬಿದ್ದು ಸತ್ತ ಚಿರತೆಯನ್ನು ನದಿಗೆಸೆದಿರೋ ಶಂಕೆಯಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.