ಚಿರತೆ…ಬಂತು ಜಾಗ್ರತೆ…

0
476

ಬೆಳ್ತಂಗಡಿ ಪ್ರತಿನಿಧಿ ವರದಿ
ಚಿರತೆ ಬಂತೂ ಚಿರತೆ…ಹೌದು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಕೆಲವು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷಗೊಂಡ ಬಗ್ಗೆ ವಾರ್ತೆ.ಕಾಂಗೆ ಮಾಹಿತಿ ಲಭ್ಯವಾಗಿದೆ.
 
 
 
ಬೆಳ್ತಂಗಡಿ ತಾಲೂಕಿನ ಕಟ್ಟ ಕಡೆಯ ಗ್ರಾಮವಾದ ಹೊಸಂಗಡಿಯ ಬಲ್ಲಂಗೇರಿ – ಅಂಗರ ಕರಿಯ ಪ್ರದೇಶದಲ್ಲಿ ಇಂದು ಮುಂಜಾನೆ ಚಿರತೆ ಪ್ರತ್ಯಕ್ಷಗೊಂಡಿತ್ತು. ಇದರಿಂದಾಗಿ ಸ್ಥಳೀಯರಲ್ಲಿ ಭೀತಿ ಉಂಟಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡುವ ರಸ್ತೆಯ ಅಂಚಿನಲ್ಲೇ ಚಿರತೆ ಪ್ರತ್ಯಕ್ಷಗೊಂಡಿತ್ತು ಎಂದು ಸ್ಥಳೀಯರು ವಾರ್ತೆಗೆ ತಿಳಿಸಿದ್ದಾರೆ.
 
ಕಳೆದ ವಾರವಷ್ಟೇ ಮೂಡಬಿದಿರೆ ಸಮೀಪದ ಕಲ್ಲಬೆಟ್ಟು , ಮಾರೂರು, ಹನ್ನೆರಡು ಕವಲು ಪ್ರದೇಶದಲ್ಲೂ ಚಿರತೆ ಕಾಣಿಸಿಕೊಂಡಿತ್ತು. ಅದೇ ಚಿರತೆ ತನ್ನ ಯಾನವನ್ನು ಬೆಳ್ತಂಗಡಿ ತಾಲೂಕಿಗೂ ವಿಸ್ತರಿಸಿತೇ ಎಂಬುದು ಈಗಿರುವ ಕುತೂಹಲ. ಚಿರತೆಯಿಂದ ಈವರೆಗೆ ಸ್ಥಳೀಯರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ.

LEAVE A REPLY

Please enter your comment!
Please enter your name here