ಚಿನ್ನಮ್ಮನಿಗೆ ಜೈಲೇ ಗತಿ!

0
287

ನಮ್ಮ ಪ್ರತಿನಿಧಿ ವರದಿ
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ಶರಣಾಗತಿಗೆ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಶಶಿಕಲಾ ಪರ ಹಿರಿಯ ವಕೀಲ ಕೆಟಿಎಸ್ ತುಳಸೀ ದಾಸ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಇಂದು ಬೆಳಗ್ಗೆ ಅರ್ಜಿ ಸಲ್ಲಿಸಿದರು. ಕೋರ್ಟ್ ಶರಣಾಗತಿಗೆ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು  ಹೇಳಿ ಅರ್ಜಿ ತಿರಸ್ಕರಿಸಿದೆ . ಇಂದು ಶಶಿಕಲಾ ಬೆಂಗಳೂರಿಗೆ ಆಗಮಿಸಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ವಿಶೇಷ ಕೋರ್ಟ್ ಗೆ ಶರಣಾಗಲಿದ್ದಾರೆ. ಬೆಂಗಳೂರಿನ ವಿಶೇಷ ಕೋರ್ಟ್ ಗೆ ಹಾಜರಾಗಲಿರುವ ಶಶಿಕಲಾ ಅವರು ರಸ್ತೆ ಮಾರ್ಗವಾಗಿಯೇ ಬರಲಿದ್ದಾರೆ. ಕೆಲ ಹೊತ್ತಿನಲ್ಲಿಯೇ ಅವರು ಹೊರಡಲಿದ್ದು ಜಯಾ ಸಮಾಧಿಗೆ ನಮಿಸಿ ಹೊರಡುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here