ಚಿನ್ನದ ಬೇಟೆಯಲ್ಲಿ ಕನ್ನಡತಿ

0
393

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಡಿ ಜನೈರೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಆಟಗಾರರು ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ ನಂತರ ಭಾರತದ ಅದರಲ್ಲೂ ಕರ್ನಾಟಕ ಗಾಲ್ಫ್ ಕ್ರೀಡಾಪಟು ರಿಯೋ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
 
 
ಅದಿತಿ ಅಶೋಕ್ ಗಾಲ್ಫ್ ಫೈನಲ್ ಪಂದ್ಯಕ್ಕೆ ಪ್ರವೇಶಿಸಿದ್ದು, ಭಾರತ ಮತ್ತೊಂದು ಪದಕ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಪರವಾಗಿ ಆಡಿದ ಹರಿಯಾಣದ ಕುಸ್ತಿಪಟು ಕಂಚಿನ ಪದಕ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಆಂಧ್ರದ ಪಿವಿ ಸಿಂಧು ಬೆಳ್ಳಿ ಪದಕ ತಂದು ಭಾರತಕ್ಕೆ ಕೀರ್ತಿ ತಂದಿದ್ದಾರೆ.
 
ಇಂದು ಮಧ್ಯಾಹ್ನ 3.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಚಿನ್ನ ಗೆದ್ದು ಬಾ ಎಂದು ಅದಿತಿ ಅಶೋಕ್ ಗೆ ಭಾರತೀಯರು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here