ಚಿತ್ರ ರಿಲೀಸ್ ವಿಳಂಬ

0
271

ಸಿನಿ ಪ್ರತಿನಿಧಿ ವರದಿ
‘ದನ ಕಾಯೋನು’ ಚಿತ್ರ ಬಿಡುಗಡೆ ಮುಂದೂಡಲಾಗಿದೆ. ಚಿತ್ರತಂಡದ ಹಗ್ಗಜಗ್ಗಾಟದಿಂದ ಬಿಡುಗಡೆ ವಿಳಂಬ ಸಾಧ್ಯತೆ ಇದೆ.
 
 
ಚಿತ್ರದ ನಟ, ನಿರ್ದೇಶಕರ ವಿರುದ್ಧ ನಿರ್ಮಾಪಕರು ಆರೋಪಿಸಿದ್ದಾರೆ. ನಟ, ನಿರ್ದೇಶಕರ ವಿರುದ್ಧ ಕಮಿಷನ್ ಪಡೆದ ಆರೋಪಿಸಿದ್ದಾರೆ. ಯೂನಿಫಿ ಮೀಡಿಯಾದಿಂದ ಕಮಿಷನ್ ಪಡೆದ ಆರೋಪ ಬಂದಿದೆ.
ನಟ ದುನಿಯಾ ವಿಜಯ್ ಮತ್ತು ನಿರ್ದೆಶಕ ಯೋಗರಾಜ್ ಭಟ್ ವಿರುದ್ಧ  ನಿರ್ಮಾಪಕ ಕನಕಪುರ ಆರ್ ಶ್ರೀನಿವಾಸ್ ಆರೋಪಿಸಿದ್ದಾರೆ.
 
 
 
ಅ.7ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಬೇಕಿತ್ತು. ಆರೋಪಕ್ಕೆ ದುನಿಯಾ ವಿಜಯ್, ಯೋಗರಾಜ್ ಭಟ್ ಬೇಸರಗೊಂಡಿದ್ದಾರೆ. ಚಿತ್ರತಂಡದಿಂದಲೂ ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ದಾಖಲಿಸಲಾಗಿದೆ. ತಂಡಕ್ಕೆ ಪೂರ್ಣ ಹಣ ಪಾವತಿ ಮಾಡಿಲ್ಲವೆಂದು ಆರೋಪ ದಾಖಲಾಗಿದೆ. ಬಾಕಿ ಹಣ ಪೂರ್ತಿ ಪಾವತಿಸದೇ ಚಿತ್ರ ಬಿಡುಗಡೆ ಮಾಡದಂತೆ ನಿರ್ಮಾಪಕರಿಗೆ ತಂಡ ಮನವಿ ಮಾಡಿದ್ದಾರೆ.
 
 
ನಟ ದುನಿಯಾ ವಿಜಯ್, ಬಹುಭಾಷಾ ನಟಿ ಪ್ರಿಯಾಮಣಿ, ರಂಗಾಯಣ ರಘು ಅಭಿನಯದ ದನಕಾಯೋನು ಚಿತ್ರ ನಿರ್ಮಾಪಕ ಶ್ರೀನಿವಾಸ್ ಕ್ಷಮೆ ಕೇಳಬೇಕೆಂದು ಯೋಗರಾಜ್ ಭಟ್ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here