ಚಿತ್ರ ನಿರ್ದೇಶಕಿ ಆಗುವತ್ತ ನನ್ನ ಚಿತ್ತ

0
851

ಚಿತ್ತ ನಟಿ ಸುಮಿತ್ರಾ ಗೌಡ ಮನದಾಳದ ಮಾತು….

ವಾರ್ತೆ ಎಕ್ಸ್‌ ಕ್ಲೂಸಿವ್‌

ಚಂದನವನ ಅನೇಕ ಪ್ರತಿಭೆಗಳ ತವರೂರು ಇಲ್ಲಿ ನಿಜವಾದ ಪ್ರತಿಭೆಗಳಿಗೆ ಮಾತ್ರ ನೆಲೆವೂರಲು ಸಾಧ್ಯ ಅನ್ನೋದು ಎಲ್ಲರಿಗೂ ತಿಳಿದ ಹಾಗೂ ತಿಳಿಯುತ್ತಿರುವ ಸತ್ಯ.. ಕನ್ನಡ ಚಿತ್ರರಂಗ ಯೋಗ (ಅದೃಷ್ಟ) ಅಲ್ಲ ಯೋಗ್ಯತೆ (ಪ್ರತಿಭೆ) ಇದ್ದವ್ರಿಗೆ ಮಾತ್ರ ಯಶಸ್ಸು ಕೊಡುತ್ತದೆ ಎಂಬ ಸಾರ್ವಕಾಲಿಕ ಸತ್ಯ ಎಲ್ಲರಿಗು ತಿಳಿಯಿತ್ತಿದೆ.. ಜಿಷ್ಣು ಚಿತ್ರದ ಮೂಲಕ ನಾಯಕ ನಟಿಯಾಗಿ ಹಾಗೂ ಚಿತ್ರದ ಸಹ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಮುಂಬೈ ಬೆಡಗಿ ಸುಮಿತ್ರಾ ಗೌಡ ಕನ್ನಡಿಗರಿಗೆ ಇನ್ನೊಂದು ಸಿಹಿ ಸುದ್ದಿ ಕೊಟ್ಟಿದಾರೆ.. ಕನ್ನಡ ಚಿತ್ರ ಒಂದನ್ನು ನಿರ್ದೇಶನ ಮಾಡುವ ವಿಷಯ ಪತ್ರಿಕೆಗೆ ತಿಳಿಸಿದ ಸುಮಿತ್ರಾ ಅವರು ಇನ್ನೂ ಹೆಸರಿಡದ ಈ ಚಿತ್ರದ ಕಥೆ ಚಿತ್ರಕತೆ ಸಂಭಾಷಣೆ ಮುಗಿದಿದೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವ ಇದೆ ಇದೊಂದು ಸ್ಲಂ ಏರಿಯಾ ದ ಬಡ ಹುಡುಗಿಯೊಬ್ಬಳು ಸಮಾಜವೇ ನೋಡುವಂತೆ ಬೆಳೆವ ಕತೆಯಾಗಿದೆ.. ಸ್ಪೋಟ್ಸ್ ರಿಲೇಟೆಡ್ ಕತೆ ಅದರಿಂದ ಹೆಚ್ಚಿನ ನಿರೀಕ್ಷೆಯಿದೆ.. ಸೆಂಟಿಮೆಂಟ್ ಎಮೋಷನ್ಸ್ ಹಾಗೂ ಮಹಿಳಾ ಪ್ರದಾನ ಚಿತ್ರ ಅದರಿಂದ ತುಂಬಾ ಜಾಸ್ತಿನೇ ವರ್ಕೌಟ್ ಮಾಡಲಿದ್ದೇನೆ.. ಈ ಚಿತ್ರದಲ್ಲಿ ನಿರ್ದೇಶನದ ಜೊತೆ ನಾಯಕಿಯಾಗಿ ಅಭಿನಯಿಸಲಿರುವ ಸುಮಿತ್ರಾ ಅವರು ಮೂಲತಹ ಕನ್ನಡತಿ.

ಮಂಡ್ಯದ ಹುಡುಗಿ.. ಬೆಳೆದದ್ದು ವಿದ್ಯಾಭ್ಯಾಸ ಮುಂಬೈ ನಲ್ಲಿ ಆದರೂ ಕನ್ನಡದ ಮೇಲೆ ಪ್ರೀತಿ ಎಂದೂ ತಪ್ಪಿಲ್ಲ.. ಸವ್ಯಸಾಚಿ ಕ್ರಿಯೇಷನ್ ಅವರ ಕನಿಕ ಕವಿತಾ ಪೂಜಾರಿ ನಿರ್ಮಾಣದ ಜಿಷ್ಣು ಚಿತ್ರದ ಮೂಲಕ ಚಿತ್ರ ಜೀವನ ಆರಂಭಿಸಿದ ಸುಮಿತ್ರಾ ಅವರು ಸದಾ ಅವಕಾಶ ಕೊಟ್ಟ ಚಿತ್ರ ನಿರ್ಮಾಣ ಸಂಸ್ಥೆಗೆ ಹಾಗೂ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.. ತನ್ನ ಎಲ್ಲಾ ಸಾಧನೆಗೆ ಹೆತ್ತವರ ಸಹಯೋಗ ನೆನಪಿಸುವುವ ಸುಮಿತ್ರಾ ಅವರು ತಂದೆ ರಮೇಶ್ ಗೌಡರ ಹೆಸರನ್ನು ತನ್ನ ಹೆಸರಿಗೆ ಜೋಡಿಸಿರುವದೇ ಅವರ ತಂದೆಯ ಮೇಲಿನ ಪ್ರೀತಿ ತೋರಿಸುತ್ತದೆ… ಪತ್ರಿಕೆಯ ಜೊತೆ ಕೊರೊನ ದ ಈ ಸಂದಿಗ್ದ ಪರಿಸ್ಥಿಯಲ್ಲಿ ಅಭಿಮಾನಿಗಳಿಗೆ “ಸಂಘಟಿತ ಹೋರಾಟ ಹಾಗು ಸೇಫ್ ಆಗಿ ಇರೋಣ” ಎಂಬ ಎಂದು ವಿನಂತಿ ಮಾಡಿದ್ದಾರೆ. ಸುಮಿ ಗೌಡ ಎಂಬ ಫೇಸ್ಬುಕ್ ಪೇಜ್ ನಲ್ಲಿ ನಾನು ಸದಾ ಲಭ್ಯವಿದ್ದು ಅಭಿಮಾನಿಗಳು ನೇರವಾಗಿ ನನ್ನ ಜೊತೆ ಸಂಪರ್ಕಿಸಿ ತಮ್ಮ ಅನಿಸಿಕೆ ಹಂಚಿಕೊಳ್ಳ ಬಹುದು ಎಂದು ತಿಳಿಸಿದ್ದಾರೆ.. ನಟ ಅನಂತನಾಗ್ ಜೊತೆ ಅಭಿನಹಿಸುವ ಅವಕಾಶಕ್ಕೆ ಎದುರು ನೋಡುತಿದ್ದೇನೆ ಎಂದ ಸುಮಿತ್ರಾ ಗೌಡ ಅವರು ನನ್ನ ನಿರ್ದೆಶನದ ಚಿತ್ರದಲ್ಲಿ ಅವರಿಗಾಗಿಯೇ ಒಂದು ಮುಖ್ಯ ಪಾತ್ರ ಇದೆ ಅವರು ಒಪ್ಪಿಕೊಂಡರೆ ತುಂಬಾ ಸಂತೋಷವಾಗಲಿದೆ.. ಅವರ ಭೇಟಿಯನ್ನು ಎದುರು ನೋಡುತಿದ್ದೇನೆ ಎಂದು ನಗುತ್ತ ಉತ್ತರಿಸುವ ಸುಮಿತ್ರಾ ರಮೇಶ್ ಗೌಡ ಅವರ ಸಿನಿ ಬದುಕು ಯಶಸ್ಸು ಆಗಲಿ ಎಂದು ಹಾರೈಸೋಣ…

LEAVE A REPLY

Please enter your comment!
Please enter your name here