ಚಿತ್ರಾ- ಪ್ರದರ್ಶನ ಉದ್ಘಾಟನೆ

0
294

 
ವರದಿ-ಚಿತ್ರ: ಸುಧೀರ್ ರಾವ್
ರಜತಪಥದ ಸಂಭ್ರಮದಲ್ಲಿರುವ ನ್ರತ್ಯನಿಕೇತನ ಕೊಡವೂರು (ರಿ) ಇವರ ತಂಡದ ಡಾ|| ಶ್ರೀಪಾದ ಭಟ್ ನಿರ್ದೇಶನದ “ಚಿತ್ರಾ” ನೃತ್ಯ ನಾಟಕದ ಪ್ರಯೋಗಗಳ ಉದ್ಘಾಟನೆ ಹಾಗೂ ಪ್ರಥಮ ಪ್ರದರ್ಶನವು ಮಣಿಪಾಲ ಪದವಿಪೂರ್ವ ಕಾಲೇಜಿನಲ್ಲಿ ಚಿನ್ನಾರಿ ಮಕ್ಕಳ ತಂಡದ ಆಶ್ರಯದಲ್ಲಿ ನಡೆಯಿತು.
ಪ್ರದರ್ಶನವನ್ನು ಉದ್ಘಾಟಿಸಿದ ರಂಗ ನಿರ್ದೇಶಕಿ ಅಭಿಲಾಶ ಎಸ್ ಇವರು ರಂಗಭೂಮಿಯಲ್ಲಿ ಅಂತರ್ಗತವಾಗಿರುವ ವಿಮೋಚನೆಯ ಸಂದೇಶವನ್ನು “ಚಿತ್ರಾ” ನೃತ್ಯ ನಾಟಕವು ಸಮರ್ಥವಾಗಿ ಬಿಂಬಿಸಿದ್ದು ಪ್ರೇಕ್ಷಕರಿಗೆ ಆಪ್ತವೆನಿಸಲಿ‌ ಎಂದು ಹಾರೈಸಿದರು.
 
 
ರವೀಂದ್ರನಾಥ ಠಾಗೋರ್ ರವರ ಚಿತ್ರಾ ವನ್ನು ಕನ್ನಡಕ್ಕೆ ರೂಪಾಂತರಿಸಿದ ಸುಧಾ ಅಡುಕಳ, ಶಾರದಾ ಉಪಾಧ್ಯ, ಕಾಲೇಜಿನ ಉಪಪ್ರಾಂಶುಪಾಲೆ ವೇದಾವತಿ ಎಸ್ ಶೆಟ್ಟಿ, ನಿರ್ದೇಶಕ ಡಾ|| ಶ್ರೀಪಾದ ಭಟ್ ಹಾಗೂ ನ್ರತ್ಯನಿಕೇತನ ಕೊಡವೂರಿನ ನಿರ್ದೇಶಕ ವಿದ್ವಾನ್ ಸುಧೀರ್ ರಾವ್ ಕೊಡವೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here