ಚಿಕ್ಕೊಡಿಯಲ್ಲಿ ಮತ್ತೊಂದು ಸೇತುವೆ ಜಲಾವೃತ

0
157

ರಾಷ್ಟ್ರೀಯ ಪ್ರತಿನಿಧಿ ವರದಿ
ನೆರೆಯ ಮಹಾರಾಷ್ಟ್ರದಲ್ಲಿ ವರುಣನ ಅರ್ಭಟ ಮುಂದುವರಿದಿದೆ. ಚಿಕ್ಕೊಡಿ ಉಪವಿಭಾಗದಲ್ಲಿ ಮತ್ತೊಂದು ಸೇತುವೆ ಜಲಾವೃತವಾಗಿದೆ.
ಉಗಾರ ಬಿಕೆ-ಉಗಾರ ಕೆಡಿ ಗ್ರಾಮಗಳ ನಡುವಿನ ಸೇತುವೆ ಜಲಾವೃತವಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳು ಜಲಾವೃತವಾಗಿದೆ. ಈವರೆಗೂ ಜಲಾವೃತಗೊಂಡ ಸೇತುವೆಗಳ ಸಂಖ್ಯೆ 10ಕ್ಕೇರಿದೆ.
 
 
 
ಇದರಿಂದ ದೂದಗಂಗಾ ನದಿ ತೀರದಲ್ಲಿ ಕಿರುದಾರಿಗಳ ಸಂಚಾರ ಸ್ಥಗಿತಗೊಂಡಿದೆ. ತೋಟದ ವಸತಿಪ್ರದೇಶಗಳಿಗೆ ತೆರಳಲು ಸ್ಥಳೀಯರು ಪರದಾಟ ನಡೆಸುತ್ತಿದ್ದಾರೆ. ನದಿ ತೀರದಲ್ಲಿರುವ ಬಹತೇಕ ದೇವಸ್ಥಾನಗಳು ಜಲಾವೃತಗೊಂಡಿದೆ. ಕಾರದಗಾ, ಸದಲಗಾ, ಕಲ್ಲೋಳ ದೇಗುಲಗಳು ಜಲಾವೃತವಾಗಿದೆ.
 
 
ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಯ್ನಾ 190ಮಿ.ಮೀ., ನವಜಾ 215 ಮಿ.ಮೀ ಮಳೆಯಾಗಿದೆ. ಮಹಾಬಳೇಶ್ವರ 195 ಮಿ.ಮೀ., ವಾರಣಾ 145 ಮಿ.ಮೀ. ಮಳೆಯಾಗಿದೆ.

LEAVE A REPLY

Please enter your comment!
Please enter your name here