ಚಿಂತನೆಗೆ ದಕ್ಕುವ ಸ್ಮಾಟ್೯

0
219

 
ಮಸೂರ ಅಂಕಣ: ಆರ್ ಎಂ ಶರ್ಮ
ಚಿಂತನೆಗೆ ದಕ್ಕುವ ಸ್ಮಾಟ್೯.
ಚಿಂತೆಗೆ ಕಿಚ್ಚಿಡಲು ಸ್ಮಾಟ್೯.
ಎಲ್ಲಿ ನೋಡಿದರೂ,ಹೇಗೇ ನೋಡಿದರೂ ಸ್ಮಾಟ್೯.
ಸ್ಮಾರಾಂಶದಲ್ಲಿ ಸ್ಮಾಟ್೯ ಎಂದರೆ-“ಸವ೯ಂ ಸ್ಮಾಟ್೯ ಮಯಂ-ಎಂಬುದು ಸವ೯ಂ ಶಿವಮಯಂ” ಎಮ್ಬುವುದಕ್ಕೆ ಸರಿಸಮಾನ.
ಸ್ಮಾಟ್೯ನ ಜಗತ್ತು ಸವ೯ವ್ಯಾಪಿ-ಇಲ್ಲಿ ನೋಡಿ-
ನಿದ್ರಿಸುವರನ್ನು ಪತ್ತೆ ಹಚ್ಚಲು,ಸುಖ ನಿದ್ದೆಗೆ, ಕಳ್ಳಕಾಕರ ಪತ್ತೆಗೆ,ಮಗುವಿನ ಸುಖ ತೊಟ್ಟಿಲಿಗೆ,ಹೀಗೆ ಸ್ಮಾಟ್-ಪುರಾಣ ಬೆಳೆಯುತ್ತದೆ ಹೇಳಹೊರತರೆ.
ದಿನ ಬೆಳಗಾದಂತೆ ಒಂದಿಲ್ಲ ಒಂದು ವ್ಯವಸ್ಥೆಗೆ ಸ್ಮಾಟ್೯ ನ ಅಳವಡಿಕೆ.
ಅಂತರಂಗದಲ್ಲಿಯೂ,ಬಹಿರಂಗದಲ್ಲಿಯೂ ಸ್ಮಾಟ್೯ದೇ ಯಾಜಮಾನ್ಯ.
ಯಂತ್ರಗಳ ಚಾಲನೆಗೆ,ನಿಲ್ಲಿಸಲು,ಮನೆಯ ಬಾಗಿಲನ್ನು ಹಾಕಲು,ತೆಗೆಯಲು ಚಿಪ್ ನ ಸಹಾಯ.
ವಿದ್ಯುತ್ ಬಲ್ಬ್ ಉರಿಸಲು,ನಂದಿಸಲು ಚಿಪ್.
ಮಂಕಿಗೆ,ಇಂಪಿಗೆ ಚಿಪ್.
ಇನ್ನೂ ಮುಂದಕ್ಕೆ ಹೋದರೆ ಅಡುಗೆ ಮನೆಯ ಕುಕರ್ ಗೆ ಚಿಪ್.
ಬಿಸಿನೀರಿನ ಯಂತ್ರ ಗೀಸರ್ ಗೆ ಚಿಪ್.
ಭಗವದ್ಗೀತೆಯಲ್ಲ್ ಗೀತಾಚಾಯ೯ರು ಹೇಳಿದಂತೆ-ಚಿಪ್ ನ ಮಹತಿ-
“ಪಶ್ಯ ಆಶ್ಚಯಾ೯ಣಿ”-ಎಂಬುದು ಇಲ್ಲಿ ಸತ್ಯವೇ.
ಈ ಚಿಪ್ ನ ವೃತ್ತಾಂತ ಏಕೆ ಎಂತ ಸಹಜವಾಗಿಯೇ ಕುತೂಹಲ,ಪ್ರಶ್ನೆ ಓದುಗರಿಗೆ ಬಂದರೆ ಅದು ಉಚಿತವೇ ಸರಿ.
ಅದಕ್ಕೆ ಉತ್ತರೆ,ನಾವೀಗ ದಿನಪತ್ರಿಕೆಯೊಂದರಲ್ಲಿ ಓದಿದೆವು=ಮಂಗಳೂರು ಮಹಾನಗರ ಪಾಲಿಕೆ ಬರೋಬ್ಬರಿ ೪೭ ಲಕ್ಶ ರುಪಾಯಿಗಳ ಖಚಿ೯ನಲ್ಲಿ ಮಂಗಳೂರಿನ ಹೃದಯಭಾಗದ ನೆಹರೂ ಮೈದಾನಕ್ಕೆ ಸೂಕ್ತ ರಕ್ಷಣೆಗೆ ಕಬ್ಬಿಣದ ಬೇಲಿಯನ್ನು ನಿಮಿ೯ಸುತ್ತಿದೆ ಎಂತ.
ರಕ್ಷಣೆಗೆ ಬೇಲಿ ಸರಿ.
ಆದರೆ ಬೇಲಿಗೆ ಬೇಡವೇ ರಕ್ಷಣೆ?
ಇಲ್ಲಿ ಹುಬ್ಬೇರಿಸುವರೇ ಹೆಚ್ಚು- ಕಾರಣ ಬೇಲಿಗೆ ರಕ್ಷಣೆ ಹುಚ್ಚಲ್ಲವೇ ಎಂತ.
ಇದು ಮೇಲ್ನೋಟಕ್ಕೆ ಸರಿ ಕಂಡರೂ ಆಂತಯ೯ದಲ್ಲಿ ದುಗುಡವಿದೆ-ಮುಜುಗರವಿದೆ-ಭಯವಿದೆ.
ಕಾರಣ ಬೇಲಿಯ ಕಬ್ಬಿಣವನ್ನು ಕದ್ದೊಯ್ಯುವ ಮಂದಿಗೆ ಕೊರತೆಯಿಲ್ಲ-ಘನತೆಯಿಲ್ಲ.
ಆದುದರಿಂದ ಬೇಲಿ ರಕ್ಷಣೆ ಅನಿವಾಯ೯.
ಇಲ್ಲಿಯೇ ಮೈಕ್ರೋ ಚಿಪ್ ನ ಕೆಲಸ ಬೇಕಿದೆ.
ಇದು “ರಿಯಲ್ ಟೈಂ”- ವರದಿಗಾರ.
ಪತ್ತೆ ಉತ್ತಮ,ಸಂಪನ್ಮೂಲ ಸುರಕ್ಷವಾಗಿರಲು ಅನುಕೂಲ.
ಬೇಲಿಗೆ ಬೇಲಿ ಇದೇ ಕಲಿಯುಗದ ಗೇಲಿ.
ಇರಲಿ ಗೇಲಿ-ಪೋಲಿಗೆ ಬರೋಬ್ಬರಿ ಗೋಲಿ.
ಇದೇ ನಮ್ಮ ಈ ಪ್ರಸ್ತುತಿ-ಸ್ಥಿತಿಯನ್ನು ತಿಳಿಗೊಳಿಸಲು-ತಿಳಿಯಗೊಳಿಸಲು ಬರೆದದ್ದು.
ಓದುಗರು ಚಚಿ೯ಸಲಿ-ಮಥಿಸಲಿ-ಮಾದ೯ನಿಸಲಿ.
ಆಗ ಎಲ್ಲಾ ಸರಿ.
ಬೇಡ ಇನ್ನಾವುದರ ಉಸಾಬರಿ.
ಹರಿಸ್ಮರಣೆ ಮಾಡು ನಿರಂತರ ಎಂತ ದಾಸರು ಹಾಡಿದರೆ ನಾವು-
“ಬೇಲಿ ಸ್ಮರಣೆ ಮಾಡು ಸದಾ” ಎಂತ ಹಾಡುತ್ತೇವೆ.
ಬೇಲಿ-ಬಂಧು-ಬಂಧುರ-ಮಧ್ರ-ನೆಮ್ಮದಿಗೆ.
ಪರಾತ್ಪರದ ಮಾತು-
ಆರ್.ಎಂ.ಶಮ೯,

LEAVE A REPLY

Please enter your comment!
Please enter your name here