ಚಾಲಕ ಬಂಧನ

0
162

ಬೆಂಗಳೂರು ಪ್ರತಿನಿಧಿ ವರದಿ
ಬ್ಯಾಂಕ್ ಹಣದೊಂದಿಗೆ ನಾಪತ್ತೆಯಾದ ಚಾಲಕ ಡೋಮ್ನಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಂಕ್ ಹಣದ ವಾಹನ ನಾಪತ್ತೆ ಪ್ರಕರಣ ಪ್ರಮುಖ ಆರೋಪಿ ಚಾಲಕ ಡೋಮ್ನಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
 
 
 
 
ನಿನ್ನೆ ರಾತ್ರಿ ಕೆ ಆರ್ ಪುರಂ ನ ಟಿನ್ ಫ್ಯಾಕ್ಟರಿ ಬಳಿ ಬಂಧಿಸಲಾಗಿದೆ. ಸ್ನೇಹಿತನ ಭೇಟಿಗೆ ಬಂದಿದ್ದರೆ ಡೋಮ್ನಿಕ್ ನನ್ನು ಬಂಧಿಸಲಾಗಿದೆ. ನ.27ರಂದು ರಾತ್ರಿ ಬಾಣಸವಾಡಿಯಲ್ಲಿರುವ ಮನೆಯೊಂದರಲ್ಲಿ ಡೋಮ್ನೀಕ್ ಪತ್ನಿ ಎಲ್ವಿನ್ ಮತ್ತು ಮಗನನ್ನು ಬಂಧಿಲಾಗಿದೆ. ಆಕೆಯ ಬಳಿಯಿದ್ದ 79.8 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.
 
 
 
ನವೆಂಬರ್ 23ರಂದು ಕೆ,ಜಿ ರಸ್ತೆಯಲ್ಲಿ ಹಣದ ವಾಹನ ನಾಪತ್ತೆಯಾಗಿದೆ. ಕೆ ಜಿ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಮುಂದೆ 1.37 ಕೋಟಿ ಹಣವಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದ. ಪೊಲೀಸರು ನ.24ರಂದು ಮವಂಟ್ ಕಾರ್ಮೆಲ್ ಕಾಲೇಜು ಬಳಿ ವಾಹನ ಪತ್ತೆಹಚ್ಚಿದ್ದರು. ಸೆಕ್ಯೂರ್ ಟ್ರಾನ್ಸಟ್ಸ್ ಕಂಪನಿ ಚಾಲಕ ಡೋಮ್ನಿಕ್ ರಾಯ್ ವಾಹನದಲ್ಲಿ 45 ಲಕ್ಷ ಹಣ, ಗನ್ ಬಿಟ್ಟು 92 ಲಕ್ಷ ರೂ,ನಗದು, ಪತ್ನಿ, ಪುತ್ರನ ಜತೆ ನಾಪತ್ತೆಯಾಗಿದ್ದ. ಸೆಕ್ಯೂರ್ ಟ್ರಾನ್ಸಟ್ಸ್ ಕಂಪನಿಯು ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಲಾಜಿ ಕ್ಯಾಶ್ ಕಂಪನಿಯನ್ನು ಗುತ್ತಿಗೆ ಪಡೆದಿತ್ತು. 1.37 ಕೋಟಿ ರೂ. ಹಣ ಎಸ್ ಬಿಐ, ಕೋಟಕ್ ಬ್ಯಾಂಕ್ ಗೆ ಸೇರಿದ್ದಾಗಿದೆ. ಸದ್ಯ ನಾಪತ್ತೆಯಾದ 92 ಲಕ್ಷ ರೂ. ಹಣದಲ್ಲಿ 79.8 ಲಕ್ಷ ರೂ.ವನ್ನು ಜಪ್ತಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here