ಚಾರ್ಜ್ ಶೀಟ್ ಸಲ್ಲಿಕೆ

0
310

ಉಡುಪಿ ಪ್ರತಿನಿಧಿ ವರದಿ
ಉಡುಪಿಯಲ್ಲಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಿಐಡಿ ತಂಡ ಉಡುಪಿ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
 
 
ಸಿಐಡಿ ತಂಡ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಿಗಳಾದ ರಾಜೇಶ್ವರಿ(50), ನವೀನ್ ಶೆಟ್ಟಿ(30), ನಿರಂಜನ್ ಭಟ್(26) ವಿರುದ್ಧ ಕೊಲೆ ಮಾಡಿದ ಆರೋಪ ದಾಖಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಶ್ರೀನಿವಾಸ ಭಟ್(56)ಮತ್ತು ರಾಘವೇಂದ್ರ (26) ವಿರುದ್ಧ ಸಾಕ್ಷಾಧಾರ ನಾಶ ಆರೋಪ ದಾಖಲಾಗಿದೆ.
 
 
ಆಸ್ತಿ, ಅಕ್ರಮ ಸಂಬಂಧದ ವಿಚಾರವಾಗಿ ಕೊಲೆ ನಡೆದಿತ್ತು. ಪೆಪ್ಪರ್ ಸ್ಪ್ರೇ ಮಾಡಿ, ರಾಡ್ ನಿಂದ ಹೊಡೆದ ಬಳಿಕ ಕೀಟನಾಶಕ ಔಷಧ ಕುಡಿಸಿ ಕೊಲೆ ಮಾಡಲಾಗಿತ್ತು. ಬಳಿಕ ಹೋಮ ಮಾಡಿ ಶವವನ್ನು ಅದರಲ್ಲಿ ಸುಟ್ಟುಹಾಕಿದ್ದರು. 1300 ಪುಟಗಳ ಚಾರ್ಜ್ ಶೀಟ್ ನಲ್ಲಿ ಸಿಐಡಿ ತಂಡ ಈ ಬಗ್ಗೆ ಉಲ್ಲೇಖನ ಮಾಡಿದೆ.

LEAVE A REPLY

Please enter your comment!
Please enter your name here