ಚಾಯಿ ಪುಸ್ತಕ ಬಿಡುಗಡೆ

0
313

ಮಡಿಕೇರಿ ಪ್ರತಿನಿಧಿ ವರದಿ
ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಉಳುವಂಗಡ ಕಾವೇರಿ ಉದಯ ಅವರು ಬರೆದಿರುವ ಚಾಯಿ ಪುಸ್ತಕವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್ ತಮ್ಮಯ್ಯ ಬಿಡುಗಡೆ ಮಾಡಿದರು.
 
 
 
ನಗರದ ಬಾಲಭವನದಲ್ಲಿ ಚಾಯಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಕೊಡವ ಭಾಷೆಯಲ್ಲಿ ಮತ್ತಷ್ಟು ಸಾಹಿತ್ಯ ಹೊರಬರಬೇಕಿದ್ದು, ಅಕಾಡೆಮಿಯೂ ಇದಕ್ಕೆ ಸಹಕಾರ ನೀಡಲಿದೆ ಎಂದರು.
 
 
ಲೇಖಕಿ ಉಳುವಂಗಡ ಕಾವೇರಿ ಉದಯ ಮಾತನಾಡಿ, ಪುಸ್ತಕ ಹೊರತರಲು ಕಾರಣರಾದ ಕೊಡವ ಮಕ್ಕಡ ಕೂಟ ಹಾಗೂ ಪುಸ್ತಕ ಬಿಡುಗಡೆಗೆ ಹಣ ಸಹಾಯ ಮಾಡಿದ, ಕೊಂಗೆಟ್ಟಿರ ಅಚ್ಚಪ್ಪ ಹಾಗೂ ಕಾವೇರಮ್ಮ ಅಚ್ಚಪ್ಪ, ದಳವಾಯಿ ಕನ್ನಂಡ ಪಡೇಬಿರ ದೊಡ್ಡಯ್ಯ ಟ್ರಸ್ಟ್ಗೆ ಧನ್ಯವಾದ ಅರ್ಪಿಸಿದರು.
ಕೊಡವ ಲೇಖನ ಹೊರಬರಲು ಕೊಡವ ಮಕ್ಕಡ ಕೂಟ ತಮ್ಮೊಂದಿಗೆ ಕೈ ಜೋಡಿಸಿದೆ. ಇಂತಹ ಕಾರ್ಯ ಮಾಡುವುದರಿಂದ ಬರಹಗಾರರಿಗೆ ತಮ್ಮ ಲೇಖನಗಳನ್ನು ಪ್ರಕಟ ಮಾಡಲು ಉತ್ತಮ ವೇದಿಕೆಯನ್ನು ಒದಗಿಸಿದಂತಾಗುತ್ತದೆ ಎಂದು ಹೇಳಿದರು.
 
 
ಗಂಡು ಮಗು ಬೇಕು ಎಂದು ಹಂಬಲಿಸುತ್ತಿದ್ದ ಪೋಷಕರಿಗೆ ಮೂರನೇ ಮಗುವಾಗಿ ಹೆಣ್ಣು ಮಗು ಜನಿಸುತ್ತದೆ. ಗಂಡು ಮಗುವಿನ ಹಂಬಲದಲ್ಲಿದ್ದ ಪೊಷಕರಿಗೆ ಇದರಿಂದ ನಿರಾಸೆ ಉಂಟಾಗುತ್ತದೆ. ಆದರೆ ಮಗು ತಾನು ಬೆಳೆದು ತನ್ನ ಬುದ್ದಿ ಶಕ್ತಿಯಿಂದ ತಂದೆ ತಾಯಿಯ ಪ್ರೀತಿಗಳಿಸುತ್ತೇನೆ. ಎಂದು ನಿರ್ಧರಿಸುತ್ತದೆ. ಆ ಹೆಣ್ಣು ಮಗು ತನ್ನ ಗುರಿ ಸಾಧನೆಯನ್ನು ಈಡೇರಿಸಿಕೊಳ್ಳುತ್ತದೆಯೋ ಇಲ್ಲವೇ ಎಂಬುದೇ ಈ ಕಾದಂಬರಿಯ ಕಥಾ ಹಂದರ.

LEAVE A REPLY

Please enter your comment!
Please enter your name here