ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವ

0
365

ಮೈಸೂರು ಪ್ರತಿನಿಧಿ ವರದಿ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವ ಭಾರೀ ಸಂಭ್ರಮದಿಂದ ನಡೆದಿದೆ. ಇಂದು ಬೆಳಗ್ಗೆ ಅದ್ಧೂರಿಯಾಗಿ ರಥೋತ್ಸವ ನೇರವೇರಿದೆ. ಬೆಳಗ್ಗೆ 7.45ರಿಂದ 8.20ರ ಶುಭತುಲಾ ಲಗ್ನದಲ್ಲಿ ರಥೋತ್ಸವ ಜರುಗಿದೆ.
 
 
 
ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಣಿ ತ್ರಿಷಿಕಾ ಕುಮಾರಿ, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸೇರಿದಂತೆ ಅನೇಕ ಗಣ್ಯರು, ಪ್ರಮುಖರು ಭಾಗಿಯಾಗಿದ್ದಾರೆ. ಮೈಸೂರು ರಾಜವಂಶಸ್ಥರು ತಾಯಿ ಚಾಮುಂಡೇಶ್ವರಿ ತೇರು ಎಳೆದಿದ್ದಾರೆ. ಸಾವಿರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡಿದ್ದಾರೆ.
 
 
ರಥೋತ್ಸವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

LEAVE A REPLY

Please enter your comment!
Please enter your name here