ಚಾಕಲೇಟ್ ಬರ್ಫಿ

0
610

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಕೋಕಾ ಪುಡಿ 250 ಗ್ರಾಂ, ಬೆಲ್ಲದ ಪುಡಿ 1 ಕಪ್,  ತುಪ್ಪ 3-4 ದೊಡ್ಡ ಚಮಚ,  ಉಪ್ಪಿಟ್ಟು ರವೆ 1 ಚಮಚ, ಕುದಿಸಿ ಗಟ್ಟಿ ಮಾಡಿದ ಹಾಲು 1/2 ಕಪ್,  ತೆಂಗಿನ ತುರಿ 1 ಕಪ್, 1/2 ಕಪ್ ಗೋಡಂಬಿ ಮತ್ತು ಬದಾಮಿ,  ಏಲಕ್ಕಿ 2.
 
 
ತಯಾರಿಸುವ ವಿಧಾನ:
ಹಾಲಿನಲ್ಲಿ ಕೋಕಾ ಪುಡಿಯನ್ನು ಹಾಕಿ ಬೆರೆಸಬೇಕು. ಈಗ ಬಾಣಲೆಗೆ ಹಾಲು ಮತ್ತು ಕೋಕಾಗ ಪುಡಿಯ ಮಿಶ್ರಣ, ರವೆ, ತೆಂಗಿನ ತುರಿ, ಬೆಲ್ಲ, ಏಲಕ್ಕಿ, ತುಪ್ಪ ಹಾಕಿ ಮಿಶ್ರಣ ಗಟ್ಟಿಯಾಗುವರೆಗೆ ಬೇಯಿಸಬೇಕು, ಈ ಮಿಶ್ರಣವನ್ನು ಆಗಾಗ ತಿರುಗಿಸುತ್ತಾ ಇರಬೇಕು. ನಂತರ ಈ ಮಿಶ್ರಣವನ್ನು ಒಂದು ಪ್ಲೇಟ್ ಗೆ ಸುರಿದು ಅದರ ಮೇಲೆ ಗೋಡಂಬಿ ಮತ್ತು ಬಾದಾಮಿ ಹಾಕಿ ಆರಲು ಬಿಡಬೇಕು. ನಂತರ ಅದನ್ನು ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಚಾಕಲೇಟ್ ಬರ್ಫಿ ರೆಡಿ.

LEAVE A REPLY

Please enter your comment!
Please enter your name here