ಚರಕದೊಂದಿಗೆ ಮೋದಿ ಚಿತ್ರ: ಸ್ಪಷ್ಟನೆ ನೀಡಿದ ಬಿಜೆಪಿ

0
530

ರಾಷ್ಟ್ರೀಯ ಪ್ರತಿನಿಧಿ ವರದಿ
ಖಾದಿ ಗ್ರಾಮೋದ್ಯೋಗ ಕ್ಯಾಲೇಂಡರ್ ಮತ್ತು ಡೈರಿಯಲ್ಲಿ ಮೋದಿ ಚಿತ್ರ ಪ್ರಕಟವಾಗಿದೆ. ಚರಕದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪೋಸ್ ಕೊಟ್ಟ ಚಿತ್ರವನ್ನು ಪ್ರಕಟಿಸಲಾಗಿದೆ.  ಇದಕ್ಕೆ ದೇಶದೆಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮೋದಿ ಮಹಾತ್ಮಗಾಂಧಿಯವರ ಸ್ಥಾನ ಪಡೆದಿದ್ದಾರೆ ಅಂತ ವಿರೋಧಿಸಿದ್ದರು.ಈ ವಿರೋಧದ ಬಗ್ಗೆ ಇಂದು ಬಿಜೆಪಿ ಸ್ಪಷ್ಟನೆ ನೀಡಿದೆ.
 
 
 
ಗಾಂಧೀಜಿಯವರ ಸ್ಥಾನ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗಾಂಧೀಜಿ ಹಾಗೂ ಅವರ ವಿಚಾರಗಳು ನಮ್ಮ ದೇಶದ ಆತ್ಮಿವಿದ್ದಂತೆ. ಆ ಸ್ಥಾನವನ್ನು ಪಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು ನಮ್ಮ ಹೃದಯದಲ್ಲಿದ್ದಾರೆ, ನಮ್ಮ ಕೆಲಸಗಳಲ್ಲಿದ್ದಾರೆ. ನಾವೆಲ್ಲವೂ ಒಟ್ಟಾಗಿ ಇರುವುದು ಗಾಂಧಿ ತತ್ವಗಳ ಆಧಾರದ ಮೇಲೆ. ಮಹಾತ್ಮರ ಫೋಟೋ ಬದಲಾಯಿಸಿರೋ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಗಾಂಧೀಜಿಯ ಹೆಸರನ್ನು ಒಂದು ಕುಟುಂಬ ರಾಜಕಾರಣಕ್ಕೆ ಬಳಸಿಕೊಂಡಿದೆ. ಆದರೆ ಬಿಜೆಪಿ ಹಾಗೂ ಮೋದಿ ರಾಜಕೀಯ ಕಾರಣಕ್ಕೆ ಬಳಸಿಕೊಂಡಿಲ್ಲ. ಪ್ರತಿ ವೇದಿಕೆಯಲ್ಲೂ ಮಹಾತ್ಮರಿಗೆ ಗೌರವ ಸಲ್ಲಿಸಿದ್ದೇವೆ. ಪ್ರತಿ ವೇದಿಕೆಯಲ್ಲೂ ಪ್ರಧಾನಿ, ಗಾಂಧೀಜಿ ಚರಣಗಳಿಗೆ ನಮಸ್ಕರಿಸಿದ್ದಾರೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

LEAVE A REPLY

Please enter your comment!
Please enter your name here