ಚನ್ನಮ್ಮ ಹಳ್ಳಿಕೇರಿ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

0
348

 
ಬೆಂಗಳೂರು ಪ್ರತಿನಿಧಿ ವರದಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕ – 2016 ನೇ ಸಾಲಿನ ಪ್ರಶಸ್ತಿಗೆ ಚನ್ನಮ್ಮ ಹಳ್ಳಿಕೇರಿ ಅವರು ಭಾಜನರಾಗಿದ್ದಾರೆ.
 
 
 
ಅಕ್ಟೋಬರ್ 2 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6-00 ಗಂಟೆಗೆ ಇಲಾಖೆಯು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
 
 
ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಸಮಿತಿಯು ಸರ್ವಾನುಮತದಿಂದ ಶ್ರೀಮತಿ ಚನ್ನಮ್ಮ ಹಳ್ಳಿಕೇರಿ ಅವರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಈ ಪ್ರಶಸ್ತಿ ಮೊತ್ತ 5.00 ಲಕ್ಷ ರೂ. ಗಳಾಗಿದೆ.
 
 
 
ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಕೆ. ಜೆ. ಜಾರ್ಜ್, ನಿವೃತ ನ್ಯಾಯಾಮೂರ್ತಿ ಹಾಗೂ ಗಾಂಧೀ ಸೇವಾ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಎ.ಜೆ. ಸದಾಶಿವ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಚಿಕ್ಕಪೇಟೆ ಶಾಸಕ ಆರ್. ವಿ. ದೇವರಾಜ್ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
 
 
ಖ್ಯಾತ ಕಲಾವಿದ ಎಂ.ಎಸ್. ಮೂರ್ತಿ ಚಿತ್ರಿಸಿರುವ ಮಹಾತ್ಮ ಗಾಂಧಿ ರೇಖಾಚಿತ್ರ ದರ್ಶನ ಹಾಗೂ ಪತ್ರಕರ್ತೆ ರೇಖಾ ರಾಣಿ ನಿರ್ದೇಶಿಸಿರುವ ಚನ್ನಮ್ಮ ಹಳ್ಳಿಕೇರಿ ಅವರ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ಖ್ಯಾತ ಗಾಯಕಿ ಸಂಗೀತ ಕಟ್ಟಿ ಮತ್ತು ತಂಡದಿಂದ ಗಾಂಧಿ ಪ್ರಿಯ ಗೀತೆಗಳ ಗಾಯನವನ್ನು ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here