ಚತುರ್ವೇದ ಕಲಶಾಭಿಷೇಕ

0
404

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಕಾಸರಗೋಡು ಜಿಲ್ಲೆ, ಕುಂಬಳೆ ಸೀಮೆಯ ಪ್ರಸಿದ್ಧ, ಪುರಾತನ ಕ್ಷೇತ್ರಗಳಲ್ಲಿ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರವೂ ಒಂದು. ಶ್ರೀ ಉದನೇಶ್ವರ, ಶ್ರೀ ಶಾಸ್ತಾರ ಹಾಗೂ ಕುಟ್ಟಿಚ್ಚಾತನನ್ನು ಆರಾಧಿಸಿಕೊಂಡು ಬರುತ್ತಿರುವ ಈ ಕ್ಷೇತ್ರದಲ್ಲಿ ನಿತ್ಯವೂ ಅನ್ನದಾನ ನಡೆಯುತ್ತಿದೆ.
 
 
ನವಂಬರ್ 16ರಿಂದ ದಶಂಬರ 13ರ ತನಕ ಪೆರಡಾಲ ಗ್ರಾಮದ ಅಧಿದೇವತೆ ಶ್ರೀ ಉದನೇಶ್ವರ ದೇವರ ಸಾನ್ನಿಧ್ಯ ವೃದ್ಧಿಗೋಸ್ಕರ ಲೋಕಕಲ್ಯಾಣಾರ್ಥವಾಗಿ ಚತುರ್ವೇದ ಕಲಶಾಭಿಷೇಕವು ನಡೆಯಲಿರುವುದು. ವೃಶ್ಚಿಕ ಮಾಸದಲ್ಲಿ 28ದಿವಸಗಳ ಕಾಲ ನಡೆಯುವ ಮಹಾಯಜ್ಞ ಇದಾಗಿದೆ. ಶ್ರೀ ಉದನೇಶ್ವರ ದೇವರ ಅನುಗ್ರಹದಿಂದ ಪ್ರಾಪ್ತವಾದ ಈ ವೇದಕಲಶಾಭಿಷೇಕ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕಾಗಿದೆ.
 
 
ಚತುರ್ವೇದ ಪಾರಾಯಣ ದಿನಗಳು :
16-11-2016ರಿಂದ 22-11-2016ರ ತನಕ ಋಗ್ವೇದ,
23-11-2016ರಿಂದ 29-11-2016ರ ತನಕ ಯಜುರ್ವೇದ, 30-11-2016ರಿಂದ 06-12-2016 ಸಾಮವೇದ,
07-12-2016ರಿಂದ 13-12-2016ರ ತನಕ ಅಥರ್ವವೇದ
ಪ್ರತೀದಿನ ಬೆಳಗ್ಗೆ 8.30ರಿಂದ 11.30ರ ತನಕ ಕಲಶ ಜಪ ಹಾಗೂ ಕಲಶಾಭಿಷೇಕದ ನಂತರ ವೈದಿಕರಿಂದ ಪ್ರಾರ್ಥನಾಪುರಸ್ಸರ ಸೇವಾಕತೃಗಳಿಗೆ ಪ್ರಸಾದ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here