ಚಂದ್ರ ದರ್ಶನವಾಗದ ಹಿನ್ನಲೆ: ನಾಳೆ ರಂಜಾನ್ ಆಚರಣೆ

0
206

 
ವರದಿ: ಲೇಖಾ
ರಂಜಾನ್ ಪ್ರಯುಕ್ತ ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ ಗುರುವಾರ ರಜೆ ಘೊಷಿಸಲಾಗಿದೆ. ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ರಂಜಾನ್‌ ಆಚರಣೆ ಗುರುವಾರಕ್ಕೆ ಮುಂದೂಡಿದ ಕಾರಣ ಬುಧವಾರ ಘೋಷಿಸಲಾಗಿದ್ದ ಸರ್ಕಾರಿ ರಜೆ ಗುರುವಾರಕ್ಕೆ ನಿಗದಿಗೊಳಿಸಲಾಗಿದೆ.
 
 
 
ಈ ಮೊದಲು ಬುಧವಾರಕ್ಕೆ ರಜೆ ನಿಗದಿಗೊಳಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ತನ್ನ ನೌಕರರಿಗೆ ಗುರುವಾರ ರಜೆ ಘೊಷಿಸಿತ್ತು. ಜತೆಗೆ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಗುರುವಾರಕ್ಕೆ ರಜೆ ನಿಗದಿಗೊಳಿಸಿದೆ.
 
 
 
ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಗುರುವಾರ ರಂಜಾನ್‌ ಹಬ್ಬ ಆಚರಿಸಲಾಗುವುದು ಎಂದು ರಾಜ್ಯ ಚಂದ್ರದರ್ಶನ ಸಮಿತಿ ಸಂಚಾಲಕ ಮೌಲಾನಾ ಸಗೀರ್‌ ಅಹಮದ್‌ ವಕ್ಫ್ ಬೋಡ್‌ ಕಚೇರಿಯಲ್ಲಿ ಘೋಷಿಸಿದ್ದಾರೆ.
 
 
 
ಸರ್ಕಾರದ ಆದೇಶದ ನಂತರ ಬುಧವಾರ ರಜೆ ನಿಶ್ಚಯ ಗೊಳಿಸಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ ಗುರುವಾರ ರಜೆ ನೀಡಲು ನಿರ್ಧರಿಸಿವೆ. ಬುಧವಾರ ಬ್ಯಾಂಕ್​ಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ.

LEAVE A REPLY

Please enter your comment!
Please enter your name here