ಗ್ರ್ಯಾಂಡ್‌ ಓಪನಿಂಗ್‌

0
158

ಸಿನಿ ಪ್ರತಿನಿಧಿ ವರದಿ
‘ಬಿಗ್‌ಬಾಸ್‌ ಸೀಸನ್‌ 4’ ರಿಯಾಲಿಟಿ ಶೋಗೆ ಭಾನುವಾರ ಗ್ರ್ಯಾಂಡ್‌ ಓಪನಿಂಗ್‌ ದೊರಕಿದೆ. ಕಿಚ್ಚ ಸುದೀಪ್‌ 15 ಜನ ಸ್ಪರ್ಧಿಗಳನ್ನು ಅದ್ಧೂರಿಯಾಗಿಯೇ ಸ್ವಾಗತಿಸಿ, 55 ಕ್ಯಾಮರಾಗಳಿರೋ ಬಿಗ್‌ಬಾಸ್‌ ಮನೆಗೆ ಕಳುಹಿಸಿದರು.
 
 
 
ಬಿಗ್‌ಬಾಸ್‌ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಶೋನಲ್ಲಿ ವಿವಿಧ ಕ್ಷೇತ್ರಗಳಿಂದ ಬಂದ 15 ಸ್ಪರ್ಧಿಗಳು ಬಿಗ್‌ಬಾಸ್‌ ಪಂಚರದಲ್ಲಿ ಮೂರು ತಿಂಗಳು ಅಂದರೆ 100 ದಿನಗಳ ಕಾಲ ವಾಸವಾಗಲಿದ್ದಾರೆ.
 
 
ಮೊದಲನೇಯದಾಗಿ ನಿರ್ದೇಶಕ ಪ್ರಥಮ್‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ನೀಡಿದರು. ಉಳಿದಂತೆ ಶೀತಲ್‌ ಶೆಟ್ಟಿ, ಶಾಲಿನಿ, ಕಿರಿಕ್‌ ಕೀರ್ತಿ,ಮಾಳವಿಕ ಅವಿನಾಶ್‌, ಕಾವ್ಯ ಶಾಸ್ತ್ರಿ, ಭುವನ್‌ ಪೊನ್ನಣ್ಣ, ಚೈತ್ರಾ, ಸಂಜನಾ ಚಿದಾನಂದ್‌, ದೊಡ್ಡ ಗಣೇಶ್‌, ವಾಣಿಶ್ರೀ, ನಿರಂಜನ್‌ ದೇಶಪಾಂಡೆ, ಕಾರುಣ್ಯ ರಾಮ್‌, ಮೋಹನ್‌ ಹಾಗೂ ಸ್ಪರ್ಶ ರೇಖಾ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ್ದಾರೆ.

LEAVE A REPLY

Please enter your comment!
Please enter your name here