ಪ್ರಮುಖ ಸುದ್ದಿರಾಜ್ಯವಾರ್ತೆ

ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ನಿ. ಉದ್ಘಾಟನೆ

 

ಸಹಕಾರೀ ಸಂಘಗಳಿಂದ ಸಮಾಜ ಕಟ್ಟುವ ಕಾರ್ಯ: ಮಾಣಿಲ ಶ್ರೀ

ಮೂಡುಬಿದಿರೆ: ಸಹಕಾರೀ ಸಂಸ್ಥೆಗಳು ಪ್ರಾಮಾಣಿಕವಾಗಿ ಸಮಾಜ ಕಟ್ಟುವ ಕಾರ್ಯವನ್ನು ಮಾಡುತ್ತಿವೆ. ಭಾರತ ದೇಶ ಆರ್ಥಿಕವಾಗಿಯೂ ಸದೃಢವಾಗಿದೆ. ಗ್ರಾಮೀಣ ಭಾಗಗಳ ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಹಕಾರೀ ತತ್ವದ ಬ್ಯಾಂಕ್‌ಗಳು ಉತ್ತಮ ಕಾರ್ಯಮಾಡುತ್ತಿವೆ ಎಂದು ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಭಾನುವಾರ ಪೆರಿಂಜೆ ಹರಿಓಂ ಕಾಂಪ್ಲೆಕ್ಸ್‌ ನಲ್ಲಿ ಗ್ರಾಮ ಸಮೃದ್ಧಿ ಸೌಹಾದ ಸಹಕಾರಿ ನಿಯಮಿತ ಬ್ಯಾಂಕ್‌ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಲೋಕ ಹಾಳಾಗಿಲ್ಲ ಎಂದು ವಿಶ್ಲೇಷಿಸಿದ ಶ್ರೀಗಳು ಲೋಕದಲ್ಲಿರುವ ಮನುಷ್ಯನ ಬುದ್ದಿ ಹಾಳಾಗಿದೆ. ಚಿಂತನೆಗಳು ಹಾಳಾಗಿವೆ. ಇದು ಬದಲಾಗಬೇಕಾಗಿದೆ ಎಂದರು. ವಿಖಾರೀ ನಮಾ ಸಂವತ್ಸರವು ದೇಶಕ್ಕೆ ಒಂದು ಕಂಠಕವನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದ ಶ್ರೀಗಳು, ಲೋಕಕಲ್ಯಾಣಾರ್ಥ ಪ್ರತೀ ಮನೆಗಳಲ್ಲಿ ಭಜನೆ, ಪೂಜೆ, ರಾಮತಾರಕ ಮಂತ್ರ ಪಠಣ, ಶಿವಪಂಚಾಕ್ಷರೀ ಮಂತ್ರ ಪಠಣ ನಡೆಯುವಂತಾಗಲಿ ಎಂದು ಹಾರೈಸಿದರು.

ದೇಶಸೇವೆಯ ಮೂಲಕ ದೇವ ಸೇವೆ ನಡೆಸುವಂತಹ ಮನಸ್ಸು ಪ್ರತಿಯೊಬ್ಬರದ್ದಾಗುವಂತಾಗಲಿ ಎಂದು ಆಶಿಸಿದರು.

108 ಶಾಖೆ: ಗ್ರಾಮ ಸಮೃದ್ಧಿ ಸೌಹಾದ ಸಹಕಾರಿ ನಿಯಮಿತ ಮುಂದಿನ ದಿನಗಳಲ್ಲಿ ನೂರೆಂಟು ಶಾಖೆಗಳನ್ನು ವಿವಿಧ ಭಾಗಗಳಲ್ಲಿ ಆರಂಭಿಸುವ ಚಿಂತನೆ ಹೊತ್ತುಕೊಂಡಿದೆ ಎಂದು ಶ್ರೀ ಕ್ಷೇತ್ರ ಕರಿಂಜೆ ಓಂ ಶ್ರೀ ಶಕ್ತಿ ಗುರುಮಠದ ಪರಮಪೂಜ್ಯ ಶ್ರೀಶ್ರೀಶ್ರೀ ಮುಕ್ತಾನಂದ ಸ್ವಾಮೀಜಿ ಅಭಿಪ್ರಾಯಿಸಿದರು.

ಹತ್ತುಗ್ರಾಮಗಳಲ್ಲಿ ಕ್ಷೇತ್ರದ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ನಡೆಯುತ್ತಿದೆ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಿ ಮುಂದುವರಿಸಬೇಕೆಂಬ ಆಶೆ ಇರುವುದಾಗಿ ತಿಳಿಸಿದರು.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಮಾತನಾಡಿ ಗ್ರಾಮೀಣ ಭಾಗದ ಜನತೆಯ ಆಶೋತ್ತರಗಳಿಗೆ ಅನುಗುಣವಾಗಿ ಬ್ಯಾಂಕ್‌ ನಡೆಯುವಂತಾಗಲಿ ಎಂದು ಹಾರೈಸಿದರು. ಜನತೆಯ ವ್ಯಕ್ತಿತ್ವ, ಹಿನ್ನಲೆಯನ್ನು ನೋಡಿ ಸಾಲ ಸೌಲಭ್ಯಗಳನ್ನು ಸಹಕಾರಿ ಬ್ಯಾಂಕುಗಳು ನೀಡುತ್ತವೆ ಎಂದವರು ಹೇಳಿದರು.

ಶ್ರೀಕ್ಷೇತ್ರ ಕರಿಂಜೆಯ ಜೀಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜೆ.ಸುಧೀರ್‌ ಹೆಗ್ಡೆ ಬೈಲೂರು ಅಧ್ಯಕ್ಷತೆ ವಹಿಸಿದ್ದರು.

ಮುಂಬೈ ನಡಿಬೆಟ್ಟು ನಿತ್ಯಾನಂದ ಹೆಗ್ಡೆ  ಕಚೇರಿ ಉದ್ಘಾಟಿಸಿದರು. ಇದೇ ಸಂದರ್ಭ ಠೇವಣಿ ಪತ್ರ, ಪಾಲು ಬಂಡವಾಳ ಪತ್ರಗಳನ್ನು ವಿತರಿಸಲಾಯಿತು.

ಮೂಡುಬಿದಿರೆ ಶಾಸಕ ಉಮಾನಾಥ ಎ.ಕೋಟ್ಯಾನ್‌, ಹೊಸಂಗಡಿ ಅರಮನೆಯ ಸುಕುಮಾರ್‌ ಶೆಟ್ಟಿ, ಬರೋಡದ ಉದ್ಯಮಿ ಶಶಿಧರ್‌ ಶೆಟ್ಟಿ, ಬಡಕೋಡಿ ಗುತ್ತಿನ ಡಾ.ಕೆ.ಆರ್.ಪ್ರಸಾದ್‌, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಮಂಜುನಾಥ್‌ ಎಸ್.ಕೆ, ಶ್ರೀ ಮಾತೃಭೂಮಿ ಸೌಹಾರ್ದ ಸಹಕಾರಿಯ ಆಡಳಿತ ನಿರ್ದೇಶಕ ಕೃಷ್ಣ ಕೊಂಪದವು, ಉದ್ಯಮಿ ಸುರೇಶ್‌ ಬಿ ಶೆಟ್ಟಿ ಗುರ್ಮೆ, ವೇಣೂರು ಸಿ.ಎ.ಬ್ಯಾಂಕ್‌ ಅಧ್ಯಕ್ಷ ಸುಂದರ ಹೆಗ್ಡೆ, ಹೊಸಂಗಡಿ ಗ್ರಾಮಪಂಚಾಯತ್‌ ಉಪಾಧ್ಯಕ್ಷೆ ಲಲಿತಾ ಟಿ.ಹೆಗ್ಡೆ, ಮೇಘನಾಥ್‌ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬಾಬು ಪೆರಿಂಜೆ ಪ್ರಾರ್ಥಿಸಿದರು. ಉಪಾಧ್ಯಕ್ಷ ಸುಧಾಕರ ಪ್ರಾಸ್ತಾವಿಕ ಹಾಗೂ ಸ್ವಾಗತಮಾತುಗಳನ್ನಾಡಿದರು.ಸಂತೋಷ್‌ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.ಸುಲೋಚನ ವಂದಿಸಿದರು.

 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here