ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅನನ್ಯ : ಶ್ರೀ ವಿಜಯನಾರಾಯಣ ಎಮ್.ಕೆ

0
224

ನಮ್ಮ ಪ್ರತಿನಿಧಿ ವರದಿ
ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹಾಗೂ ವಿ.ವಿ.ಪುರಂ ಕಾನೂನು ಕಾಲೇಜಿನಲ್ಲಿ ನಡೆದ ಕನ್ನಡ ಚರ್ಚಾ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಕಾಲೇಜಿನ ವಿದ್ಯಾರ್ಥಿನಿಯಾದ ವೈಭವಿ ಹಾಗೂ ಪಂಚಮ ಸ್ಥಾನ ವಿಜೇತ ಮಹಮ್ಮದ್ ಗಝಾಲಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಗುಡ್ಡಗಾಡು ಓಟ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ರಕ್ಷಿತಾ ,ಅಶ್ವಿನಿ ತ್ರತೀಯ ಸ್ಥಾನ ,ಚತುರ್ಥ ಸ್ಥಾನ ರಶ್ಮಿ ಹೆಚ್.ಎಸ್, ಪಂಚಮ ಚೇತನಾ ಕೆ ,ಎಂಟನೇ ಸ್ಥಾನಿಯಾದ ಭವ್ಯಾ ಜಿ. 16 ನೇ ಸ್ಥಾನವನ್ನು ಕಿರಣಾ ಗಳಿಸಿದ್ದರು. ಹಾಗೇಯೇ ಅಂತಿಮ ಕಾನೂನು ವಿದ್ಯಾರ್ಥಿ ಶಶಿಕುಮಾರ್ ನಾಲ್ಕನೇ ಬಾರಿ ಕಬಡ್ಡಿ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ತಂಡದ ನಾಯಕತ್ವವನ್ನು ಪಡೆದುದರ ಕಾರಣದಲ್ಲಿ ಅಭಿನಂದಿಸಲಾಯಿತು.
 
 
 
ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಕೃಷ್ಣಮೂರ್ತಿ ಕೆ.ಜಿ . ವಹಿಸಿದ್ದರು . ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕರಾದ ವಿಜಯನಾರಾಯಣ ಕೆ.ಎಂ., ಕಾಲೇಜಿನ ಕ್ರೀಡಾ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕರಾದ ರಾಜೇಂದ್ರ ಪ್ರಸಾದ್ ಎ. ಹಾಗೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ , ಸಾಂಸ್ಕೃತಿಕ ವಿಭಾಗದ ಪ್ರಭಾರ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಹರೀಶ್ ರಾವ್ ಉಪಸ್ಥಿತರಿದ್ದರು.
 
 
ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ ಎಂ. ಮಾತನಾಡಿ ವಿದ್ಯಾರ್ಥಿಗಳು ತೋರಿದ ಸಾಧನೆಗೆ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಾ ಪ್ರಸ್ತುತ ಇರುವ ವಿದ್ಯಾರ್ಥಿಗಳಿಗೆ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿ ತನಗೆ ಹಾಗೂ ಕಲಿತ ಕಾಲೇಜಿಗೆ ಹೆಸರು ತರುವಂಥವರಾಗಬೇಕೆಂದರು. ಅಭಿನಂದಿಸಲ್ಪಟ್ಟ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹೇಳುತ್ತಾ ,ತಾವು ಬೆಳೆಯಲು ಅವಕಾಶ ಮಾಡಿಕೊಟ್ಟ ಸರ್ವರಿಗೂ ಕೃತಜ್ಞತೆಯನ್ನು ಅರ್ಪಿಸಿದರು.ತದನಂತರ ಪ್ರಾಂಶುಪಾಲರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ತೇಜಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here