'ಗ್ರಾಮರಾಜ್ಯ’

0
218

ಬೆಂಗಳೂರು ಪ್ರತಿನಿಧಿ ವರದಿ
ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎಂಬ ಹಿನ್ನೆಲೆಯಲ್ಲಿ ಗ್ರಾಮೋದ್ಯಮವನ್ನು ಬೆಂಬಲಿಸುವ, ಹಳ್ಳಿಯಲ್ಲಿ ಬೆಳೆದ ವಿಷಮುಕ್ತವಾದ ಆಹಾರವಸ್ತುಗಳನ್ನು ಹಾಗೂ ರಾಸಾಯನಿಕ ರಹಿತ ದಿನಬಳಕೆ ವಸ್ತುಗಳನ್ನು ನೇರವಾಗಿ ನಗರಗಳಿಗೆ ಪೂರೈಸುವ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಕಲ್ಪನೆಯ ’ಗ್ರಾಮರಾಜ್ಯ’ ವಿಭಾಗದಿಂದ ಶುದ್ಧ ಜೇನುತುಪ್ಪ ಹಾಗೂ ವಿವಿಧ ಬಗೆಯ ಉಪ್ಪಿನಕಾಯಿ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು.
 
 
 
ಬೆಂಗಳೂರಿನ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮರಾಜ್ಯದ ಕಾರ್ಯದರ್ಶಿ ಕೃಷ್ಣಪ್ರಸಾದ ಅಮ್ಮಂಕಲ್ಲು, ಸಹಕಾರ್ಯದರ್ಶಿ ಶಶಾಂಕ ಕಂಗಿಲ ಹಾಗೂ ಗ್ರಾಮರಾಜ್ಯ ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.
 
 
 
ಗ್ರಾಮರಾಜ್ಯದ ಉತ್ಪನ್ನಗಳು ಆನ್ ಲೈನ್ ನಲ್ಲಿಯೂ ಲಭ್ಯವಾಗಲಿದ್ದು, ಅಕ್ಟೋಬರ್ 1 ರಿಂದ ಗ್ರಾಮರಾಜ್ಯದ ಜಾಲತಾಣ www.gramarajya.online ನಲ್ಲಿ ಉತ್ಪನ್ನಗಳನ್ನು ಆರ್ಡರ್ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here