ಗ್ಯಾಟ್-2016 ಪ್ರಾರಂಭ

0
459

ಬೆಂಗಳೂರು ಪ್ರತಿನಿಧಿ ವರದಿ
ಗ್ಯಾಟ್-2016 (ಗೀತಂ ಪ್ರವೇಶ ಪರೀಕ್ಷೆ) ಪ್ರಾರಂಭ
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಗೀತಂ ವಿವಿಯ 2016ರ ಪ್ರವೇಶ ಪರೀಕ್ಷೆ ‘ಗ್ಯಾಟ್’ ಮಂಗಳವಾರ ಪ್ರಾರಂಭವಾಗಿದ್ದು, ಮೇ 8ರವರೆಗೆ ನಡೆಯಲಿದೆ. ಸುಮಾರು 14,000 ವಿದ್ಯಾರ್ಥಿಗಳು ಗೀತಂ ವಿವಿಯಲ್ಲಿ ಪ್ರವೇಶ ಪಡೆಯಲು ಈ ಪರೀಕ್ಷೆ ಬರೆಯುತ್ತಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 2 ಆಗಿತ್ತು.
 
 
ವ್ಯಾಪ್ತಿಗೆ ಬರುವ ಪ್ರೋಗ್ರಾಂಗಳು
ಗೀತಂ ವಿವಿ 10 ಬಿ.ಟೆಕ್ ಪ್ರೋಗ್ರಾಂ, ಇಸಿಇ ಮತ್ತು ಮೆಕ್ಯಾನಿಕಲ್ ನಲ್ಲಿ 6 ವಾರ್ಷಿಕ ಡ್ಯುಯೆಲ್ ಡಿಗ್ರಿ ಪ್ರೋಗ್ರಾಂ (ಬಿ.ಟೆಕ್ ಮತ್ತು ಎಂ. ಟೆಕ್) ಆಫರ್ ಮಾಡುತ್ತಿದೆ.
ಬೆಂಗಳೂರು ಕ್ಯಾಂಪಸ್ ನಲ್ಲಿ ಆರು ಬಿ.ಟೆಕ್ ಪ್ರೋಗ್ರಾಂಗಳನ್ನು ಆಫರ್ ಮಾಡಲಾಗುತ್ತಿದೆ.
ವಿಶಾಖಪಟ್ಟಣ ಕ್ಯಾಂಪಸ್ ನಲ್ಲಿ ಬಯೋಟೆಕ್ನಾಲಜಿ ಮತ್ತು ಹೈದರಾಬಾದ್ ಕ್ಯಾಂಪಸ್ ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ನ ವಿಶೇಷ ಪ್ರೋಗ್ರಾಂ ಆಫರ್ ಮಾಡುತ್ತಿದೆ.
16 ಎಂ.ಟೆಕ್ ಪ್ರೋಗ್ರಾಂಗಳನ್ನು ವಿಶಾಖ ಪಟ್ಟಣ ಕ್ಯಾಂಪಸ್ ಮತ್ತು ಹೈದರಾಬಾದ್ ಕ್ಯಾಂಪಸ್ ನಲ್ಲಿ 4 ಎಂ. ಟೆಕ್ ಪ್ರೋಗ್ರಾಂ ಆಫರ್ ಮಾಡುತ್ತಿದೆ.
ಬಿ.ಆರ್ಕ್, ಬಿ. ಫಾರ್ಮಾ ಮತ್ತು ಎಂ. ಫಾರ್ಮಾವನ್ನು ವಿಶಾಖ ಪಟ್ಟಣ ಕ್ಯಾಂಪಸ್ ನಲ್ಲಿ ಆಫರ್ ಮಾಡುತ್ತಿದೆ.
 
 
 
ಹೊಸ ಪ್ರೋಗ್ರಾಂಗಳು
2016-17 ಸಾಲಿನಲ್ಲಿ ಎಂ.ಟೆಕ್ ನಲ್ಲಿ ಎರಡು ಹೊಸ ಇನ್ನೋವೇಟಿವ್ ಪ್ರೋಗ್ರಾಂಗಳನ್ನು ಆಫರ್ ಮಾಡುತ್ತಿದೆ.
ವಿಶಾಖ ಪಟ್ಟಣ ಕ್ಯಾಂಪಸ್ ನಲ್ಲಿ ಎಂ. ಟೆಕ್ ಇನ್ ಡೇಟಾ ಸೈನ್ಸ್ ಆಫರ್ ಮಾಡಲಾಗುತ್ತದೆ.
ಎಂ.ಟೆಕ್ ಇನ್ ಕಂಪ್ಯೂಟರ್ ಎಡೈಡ್ ಡಿಸೈನ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಎಂಜಿನಿಯರಿಂಗ್ ಪ್ರೋಗ್ರಾಂನ್ನು ಹೈದರಾಬಾದ್ ಕ್ಯಾಂಪಸ್ ನಲ್ಲಿ ಆಫರ್ ಮಾಡಲಾಗುತ್ತದೆ.
 
 
ಆನ್ ಲೈನ್ ಪ್ರವೇಶ ಪರೀಕ್ಷೆ
ಗೀತಂ ವಿವಿಯು ರಾಷ್ಟ್ರೀಯ ಮಟ್ಟದಲ್ಲಿ ಆನ್ ಲೈನ್ ಪ್ರವೇಶ ಪರೀಕ್ಷೆಗಳನ್ನು ಟೆಕ್ನಾಲಜಿ, ಅಕ್ರಿಕಲ್ಚರ್ ಮತ್ತು ಫಾರ್ಮಸಿ ವಿಭಾಗದಲ್ಲಿ ಯುಜಿ ಮತ್ತು ಪಿಜಿ ಪ್ರವೇಶಕ್ಕೆ 44 ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ.
 
 
ಪರೀಕ್ಷೆ ಕೇಂದ್ರಗಳು
ಅನಂತಪುರ, ಬಳ್ಳಾರಿ,ಬೆಂಗಳೂರು (ಗೀತಂ ಕ್ಯಾಂಪಸ್), ಬೆಂಗಳೂರು (ನಗರ), ಭೋಪಾಲ್, ಭುವನೇಶ್ವರ, ಬಿಲಾಸ್ಪುರ, ಚೆನ್ನೈ, ಚಿತ್ತೂರು, ಕೊಯಂಬತ್ತೂರು, ಗುಂಟೂರು, ಗುವಾಹಟಿ, ಹೈದರಾಬಾದ್ (ಗೀತಂ ಕ್ಯಾಂಪಸ್), ಹೈದರಾಬಾದ್ (ಸೈಫಾಬಾದ್), ಹೈದರಾಬಾದ್ (ನೆಲ್ಲೂರು), ಹುಬ್ಬಳ್ಳಿ, ಜೆಮ್ ಶೆಡ್ ಪುರ, ಕಡಪಾ, ಕಾಕಿನಾಡ, ಕರೀಂ ನಗರ, ಖಮ್ಮಂ, ಕೊಲ್ಕತ್ತಾ, ಕೊಚ್ಚಿ, ಕೋಟಾ, ಕರ್ನೂಲ್, ಲಖ್ನೋ, ಮಂಗಳೂರು, ಮೈಸೂರು, ನಾಗಪುರ, ನೆಲ್ಲೂರು, ನವದೆಹಲಿ, ನಿಝಾಮಾಬಾದ್, ಅಂಗೋಲೆ, ಪಟನಾ, ಪುಣೆ, ರಾಯಪುರ, ರಾಜಮಂಡ್ರಿ, ರಾಂಚಿ, ತದೆಪಲ್ಲಿಗುಂಡಂ, ತಿರುಪತಿ, ತಿರುವನಂತಪುರ, ವಿಜಯವಾಡ, ವಿಶಾಖಪಟ್ಟಣ ಮತ್ತು ವಾರಂಗಲ್.
 
 
 
ಸ್ಕಾಲರ್ ಶಿಪ್ ಹಾಗೂ ಸ್ಟೈಪೆಂಡ್ ಗಳು
ಗೀತಂ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಹತ್ತು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೇಖಡಾ 100 ಶುಲ್ಕ ರಿಯಾಯಿತಿ ನೀಡಲಾಗುವುದು.
11ರಿಂದ 100 ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೇಖಡಾ 50 ರಷ್ಟು ಶುಲ್ಕ ರಿಯಾಯಿತಿ ನೀಡಲಾಗುವುದು.
ಪ್ರತೀ ಬ್ರಾಂಚ್ ನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇಖಡಾ 5 ಸ್ಕಾಲರ್ ಶಿಪ್ ನೀಡಲಾಗುವುದು.
 
 
ಗೀತಂ ವಿವಿಯ ಬೆಂಗಳೂರು ಕ್ಯಾಂಪಸ್ ನಲ್ಲಿ ಸಿಇಟಿ ಹಾಗೂ ಕಾಮೆಡ್ ಕೆ ಬರೆದ ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ಕಾಮೆಡ್ ಕೆ ನಿಗದಿತ ಶುಲ್ಕದಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ. ಗೀತಂ ವಿವಿ ಬಗ್ಗೆ ಹೆಚ್ಚಿನ ಮಾಹಿತಿಗೆ www.gitam.edu ಪರಿಶೀಲಿಸಿ.

LEAVE A REPLY

Please enter your comment!
Please enter your name here