ಗೌರಿಶಂಕರ ಸ್ವಾಮೀಜಿ ವಿಧಿವಶ

0
328

ಬೆಂಗಳೂರು ಪ್ರತಿನಿಧಿ ವರದಿ
ಅನಾರೋಗ್ಯದಿಂದ ಬಳಲುತ್ತಿದ್ದ ಗೌರಿಶಂಕರ ಸ್ವಾಮೀಜಿ(71) ವಿಧಿವಶರಾಗಿದ್ದಾರೆ. ಸ್ವಾಮೀಜಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ.
 
 
 
ಇವರು ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಾ.ಶಿವಕುಮಾರ ಶ್ರೀ ಬಳಿಕ ತುಮಕೂರಿನ ಸಿದ್ಧಗಂಗಾಮಠದ ಉತ್ತರಾಧಿಕಾರಿ ಪಟ್ಟಕ್ಕೆ ಬಯಸಿದ್ದರು. ಗೌರಿಶಂಕರ ಸ್ವಾಮೀಜಿ ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು. ತುಮಕೂರಿನ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು.
 
 
ಹಲವು ಕಾರಣಗಳಿಂದ ಇವರನ್ನು ಮಠದಿಂದ ಹೊರಹಾಕಿದ್ದರು. ಸದ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗೊಲ್ಲಹಳ್ಳಿ ಬಳಿ ಸಿದ್ಧಗಂಗಾಮಠ ಸ್ಥಾಪಿಸಿ ವಾಸವಾಗಿದ್ರು. ಕೊನೇ ಘಳಿಗೆಯಲ್ಲೂ ಶಿವಕುಮಾರ ಶ್ರೀಗಳನ್ನು ನೋಡಲು ಗೌರಿಶಂಕರ ಶ್ರೀ ಆಸ್ಪತ್ರೆಯಲ್ಲಿ ಭಕ್ತರ ಮುಂದೆ ಬಯಕೆ ವ್ಯಕ್ತಪಡಿಸಿದ್ದರು.

LEAVE A REPLY

Please enter your comment!
Please enter your name here