ವಾರ್ತೆ

ಗೌರವಾರ್ಪಣೆ

 
ವರದಿ : ಗೋವಿಂದಬಳ್ಳಮೂಲೆ
ಎಂಡೋಸಲ್ಫಾನ್ ಪೀಡಿತರ ಪರವಾಗಿ ನಡೆಸಿದ ಹೋರಾಟಕ್ಕಾಗಿ ಡಾ.ಮೋಹನ ಕುಮಾರ್ ಏತಡ್ಕ ಅವರಿಗೆ ಕೈರಳಿ ಡಾಕ್ಟರ್ಸ್ ಅವಾರ್ಡ್ 2016 ಎಂಬ ಪ್ರಶಸ್ತಿ ಲಭಿಸಿರುತ್ತದೆ.
g award
ಕೈರಳಿ ಟಿ ವಿ ಚಾನಲ್ ಅವರ ನೇತೃತ್ವದಲ್ಲಿ ಕೊಟ್ಟಾಯಂನ ತಿರುವಲ್ಲ ಮೆಡಿಕಲ್ ಕಾಲೇಜಿನಲ್ಲಿ ಜರಗಿದ ಸಮಾರಂಭದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಯವರು ಡಾ.ಮೋಹನ ಕುಮಾರ್ ಏತಡ್ಕ ಅವರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರಸಿದರು.
ಪಳ್ಳತ್ತಡ್ಕ ಪೆಲತ್ತಡಿ ಶಂಕರ ಭಟ್ ಅವರ ನಿವಾಸದಲ್ಲಿ ಜರಗಿದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ಸಭೆಯಲ್ಲಿ ಗೌರವ ಪ್ರಶಸ್ತಿಗೆ ಭಾಜನರಾದ ಡಾ.ಮೋಹನ ಕುಮಾರ್ ಏತಡ್ಕಅವರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು.
 
ಸಭೆಯ ಆರಂಭದಲ್ಲಿ ಚಲಿಸುವ ಗೋ ಆಲಯದ ಗೋಮಾತೆಗೆ ಶಂಕರ ಭಟ್ ಅವರು ಗೋ ಪೂಜೆ ನೆರವೇರಿಸಿದರು ಮತ್ತು ಸರ್ವರೂ ಗೋಮಾತೆಗೆ ಆರತಿ ಬೆಳಗಿದರು. ಧ್ವಜಾರೋಹಣವಾಗಿ ಶಂಖಧ್ವನಿ, ಗುರುವಂದನೆಯೊಂದಿಗೆ ಸಭೆ ಆರಂಭವಾಯಿತು. ಬಿ. ಜಿ. ರಾಮ ಭಟ್ ಅಧ್ಯಕ್ಷಸ್ಥಾನ ವಹಿಸಿದರು. ಮಂಡಲ ಕಾರ್ಯದರ್ಶಿ ಸತ್ಯನಾರಾಯಣ ಭಟ್ಟ ಮೊಗ್ರ ಅವರು ಗತ ಸಭೆಯ ವರದಿ ನೀಡಿ ಸಭಾ ಸಂಯೋಜನೆ ಮಾಡಿದರು. ಮಂಡಲ ಕೊಶಾಧಿಕಾರಿಗಳಾಗಿರುವ ಕುಮಾರ್ ಪೈಸಾರಿ ಅವರು ಲೆಕ್ಕಪತ್ರ ಮಂಡನೆಗೊಳಿಸಿದರು.
ವಿಭಾಗ ಪ್ರಮುಖರು, ವಲಯ ಪದಾಧಿಕಾರಿಗಳು ವರದಿಗಳನ್ನಿತ್ತರು. ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಯುಕ್ತ ರಾಮತಾರಕ ಜಪ, ಶಾಂತಿಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here