ಗೌರವಾರ್ಪಣೆ

0
581

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್, ಬದಿಯಡ್ಕ
ಮುಖಾರಿ/ಮೂವಾರಿ ಸಮುದಾಯ ಸಂಘ ಬದಿಯಡ್ಕ ವಲಯ ವತಿಯಿಂದ ಸಮುದಾಯದ ಹಿರಿಯ ವ್ಯಕ್ತಿಗಳಿಗೆ ಗೌರವಾರ್ಪಣೆ ಮಾಡುವ ಕಾರ್ಯಕ್ರಮ ಇತ್ತೀಚೆಗೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಿತು.
 
 
 
ಬದಿಯಡ್ಕ ವಲಯದ ಅಧ್ಯಕ್ಷ ಓಂ ಪ್ರಕಾಶ್ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕುಞ್ಞಪ್ಪ ಮುಖಾರಿ ಕುಡ್ಪಂಗುಯಿ, ದೂಮಾಲು ಇಕ್ಕೇರಿ ಮತ್ತು ರತ್ನಗಿರಿ ಕುದುರೆಕ್ಕಾಳಿಯಮ್ಮ ಕ್ಷೇತ್ರದ ಕಾರ್ನವರು ಬದಿಯಡ್ಕ ವಲಯದ ಬಟ್ಯಕುಞ್ಞ ಮುಖಾರಿ ಬದಿಯಡ್ಕ ಇವರನ್ನು ಶಾಲು ಹೊದಿಸಿ ಫಲವಸ್ತುಗಳನ್ನು ನೀಡಿ ಗೌರವಿಸಲಾಯಿತು.
 
 
ಪ್ಲಸ್ ಟು ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರಸೀನ ಕಾಡಮನೆ ಮತ್ತು ಎಸ್. ಎಸ್. ಎಲ್. ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರಸೀಜಾ ಕಾಡಮನೆ ಇವರನ್ನು ಸಮುದಾಯದ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
 
 
 
ಪ್ರಾದೇಶಿಕ ಸಮಿತಿ ಅಧ್ಯಕ್ಷರಾದ ಜಯರಾಮ ಪೊನ್ನಂಗಳ, ಕಾರ್ಯದರ್ಶಿ ರಾಮ ನಡುವಡ್ಕ, ಮತ್ತು ಬೇರ್ಯತ್ತ್ ವೀಡ್ ತರವಾಡಿನ ಆಡಳಿತ ಸಮಿತಿ ಅಧ್ಯಕ್ಷರಾದ ನಾರಾಯಣ ಅಡ್ಕತ್ತಬೈಲು ಶುಭಾಸಂಶನೆ ಗೈದರು. ನೀರ್ಚಾಲು ವಲಯ ಪ್ರತಿನಿಧಿಯಾದ ಸುರೇಶ ಶೇಂತಾರು, ಪ್ರಭಾಕರ ಟೈಲರ್ ಬದಿಯಡ್ಕ ಉಪಸ್ಥಿತರಿದ್ದರು. ಕಾವ್ಯಶ್ರೀ ಬದಿಯಡ್ಕ ಪ್ರಾರ್ಥನೆ ಹಾಡಿದರು. ಅಶೋಕ ಕುಡ್ಪಗುಂಯಿ ಸ್ವಾಗತಿಸಿ, ಪ್ರಶಾಂತ್ ಬದಿಯಡ್ಕ ವಂದಿಸಿದರು. ವಿನೋದ್ ಚಾಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here